ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮೊಟ್ಟೆ ಎಸೆದವ ಯಾರು ಎಂದು ಬಿಜೆಪಿ ಫೋಟೋ ರಿಲೀಸ್ ಮಾಡಿದೆ.
ಸಿದ್ದರಾಮಯ್ಯನವರ ಕಾರಿನ ಮೇಲೆ ಸಂಪತ್ ಎನ್ನುವ ವ್ಯಕ್ತಿ ಮೊಟ್ಟೆ ಎಸೆದಿರುವುದು ಬೆಳಕಿಗೆ ಬಂದಿದೆ. ಆದ್ರೆ, ಆತ ಯಾವ ಪಕ್ಷದ ಕಾರ್ಯಕರ್ತರ ಎನ್ನುವುದು ಮಾತ್ರ ಚರ್ಚೆಗೆ ಗ್ರಾಸವಾಗಿದೆ. ಸ್ವತಃ ಸಂಪತ್ ನಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೆ ಕೊಟ್ಟಿದ್ದಾನೆ. ಅಲ್ಲದೇ ಇತ್ತ ಕಾಂಗ್ರೆಸ್ ಆ ಸಂಪತ್ ಬಿಜೆಪಿ ಕಾರ್ಯಕರ್ತ ಎನ್ನುವ ಫೋಟೋಗಳನ್ನ ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪತ್ ಯಾವ ಪಕ್ಷದವ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆದಿದ್ದ ಸಂಪತ್ ಯಾವ ಪಕ್ಷದ ಕಾರ್ಯಕರ್ತ ಎನ್ನುವ ಗೊಂದಲ ಇನ್ನೂ ಬಗೆಹರಿದಿಲ್ಲ. ಮತ್ತೊಂದೆಡೆ ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಹೊಡೆದ ದಿನವೇ ನನ್ನ ಕಾರಿಗೂ ಮಡಿಕೇರಿಯಲ್ಲಿ ಮೊಟ್ಟೆ ಹೊಡೆದಿದ್ದಾರೆ ಎಂದು ಮಾಜಿ ಸಚಿವ ಜೀವಿಜಯ ಹೇಳಿದ್ದಾರೆ.
ಆರೋಪಿ ಸಂಪತ್‍ನ ಸಹೋದರನ ಮದುವೆಯಲ್ಲಿ ಭಾಗಹಿಸಿರುವ ಮತ್ತು ಜೀವಿಜಯ ಅವರೊಂದಿಗೆ ಸಂಪತ್ ಇರುವ ಫೋಟೋವು ಹರಿದಾಡಿದೆ. ಹೀಗಾಗಿ ಸಂಪತ್ ಬಿಜೆಪಿ ಮತ್ತು ಕಾಂಗ್ರೆಸ್ ನವನು ಎನ್ನುವ ಆರೋಪ ಪ್ರತ್ಯಾರೋಪ ಮತ್ತಷ್ಟು ತೀವ್ರಗೊಂಡಿದೆ.