Ad Widget .

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್| ಶೀಘ್ರದಲ್ಲೇ ಹೆಚ್ಚಳವಾಗಲಿದೆ ತುಟ್ಟಿಭತ್ಯೆ(DA)

ಸಮಗ್ರ ನ್ಯೂಸ್: ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿರುವ ಮುಂದಿನ ಸುತ್ತಿನ ತುಟ್ಟಿ ಭತ್ಯೆ ಹೆಚ್ಚಳದ ಕುರಿತಂತೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಕೊಡುವ ಸಾಧ್ಯತೆ ಇದೆ. ಇತ್ತೀಚಿನ ಹಣದುಬ್ಬರದ ಅಂಕಿಅಂಶಗಳನ್ನು ಆಧರಿಸಿ ಶೇಕಡಾ 4 ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಲಿದ್ದು, 38 ಪ್ರತಿಶತದವರೆಗೆ ತುಟ್ಟಿಭತ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜನವರಿಯಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇಕಡಾ 3 ರಷ್ಟು ಡಿಎ ಹೆಚ್ಚಳ ಮಾಡಿತ್ತು. ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಅಂಕಿಅಂಶಗಳನ್ನು ಆಧರಿಸಿ ಡಿಎ ಹೆಚ್ಚಳ ಮಾಡುತ್ತದೆ. ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಹೆಚ್ಚಳದ ನಂತರ ಡಿಎ ಶೇಕಡಾ 4ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇಂದ್ರ ಸರ್ಕಾರಿ ನೌಕರರು ಪ್ರಸ್ತುತ ಶೇಕಡಾ 34 ರಷ್ಟು ಡಿಎ ಪಡೆಯುತ್ತಿದ್ದಾರೆ.

Ad Widget . Ad Widget . Ad Widget .

ಡಿಎ ಹೆಚ್ಚಳ ನಿರೀಕ್ಷೆ ಸುಳ್ಳಲ್ಲ, ಹೊಸ ವೇತನ ಆಯೋಗ ಸದ್ಯಕ್ಕಿಲ್ಲ:
ಡಿಎ ಹೆಚ್ಚಳದ ಅಧಿಕೃತ ದೃಢೀಕರಣಕ್ಕಾಗಿ ಕಾಯುತ್ತಿರುವ ನೌಕರರು ಇನ್ನೂ ಸ್ವಲ್ಪದಿನಗಳ ಕಾಲ ಕಾಯಬೇಕಾಗಿದೆ. ಕೇಂದ್ರವು ಸಂಪುಟ ಸಭೆಯಲ್ಲಿ ಘೋಷಣೆ ಮಾಡಬೇಕಿದೆ. ಅದು ಶೀಘ್ರದಲ್ಲೇ ಆಗಲಿದೆ ಎಂದು ಹೇಳಲಾಗಿದೆ.

ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ:
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಜುಲೈನಿಂದ 34 ಪ್ರತಿಶತದ ಬದಲಿಗೆ 38 ಪ್ರತಿಶತ ಡಿಎ ಮತ್ತು ಡಿಯರ್ನೆಸ್ ರಿಲೀಫ್ (ಡಿಆರ್) ಪಡೆಯುವ ನಿರೀಕ್ಷೆಯಿದೆ. ಹೆಚ್ಚಳದ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಮಾಡುವುದು ಬಾಕಿ ಇದೆ. ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ನೀಡಿದರೆ ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ.

ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವು 129 ಕ್ಕಿಂತ ಹೆಚ್ಚಿರುವಾಗ, ಈ ವರ್ಷದ ಜನವರಿಯಲ್ಲಿ, ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 31 ರಿಂದ 34 ಕ್ಕೆ ಹೆಚ್ಚಿಸಿತ್ತು. ಈಗ ತುಟ್ಟಿಭತ್ಯೆ ಶೇಕಡ 4 ರಷ್ಟು ಹೆಚ್ಚಳವಾಗಲಿದೆ. ಆದರೆ ಈಗ ಎಲ್ಲರಲ್ಲೂ ಕಾಡುತ್ತಿರುವ ಒಂದೇ ಪ್ರಶ್ನೆ, ಡಿಎ ಹೆಚ್ಚಳವನ್ನು ಯಾವಾಗ ಘೋಷಿಸಲಾಗುತ್ತದೆ ಎನ್ನುವುದು.

ತುಟ್ಟಿಭತ್ಯೆ ಹೆಚ್ಚಳ ಯಾವಾಗ? ನೌಕರರ ಕಾತುರದ ಪ್ರಶ್ನೆಗೆ ಇಲ್ಲಿದೆ ಉತ್ತರತುಟ್ಟಿಭತ್ಯೆ ಹೆಚ್ಚಳ ಯಾವಾಗ? ನೌಕರರ ಕಾತುರದ ಪ್ರಶ್ನೆಗೆ ಇಲ್ಲಿದೆ ಉತ್ತರ

ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಯಾವಾಗ?
ಸೆಪ್ಟಂಬರ್ ತಿಂಗಳಿನಲ್ಲಿ ನವರಾತ್ರಿಯ ಅಥವಾ ದಸರಾ ಹಬ್ಬದ ಉಡುಗೊರೆಯಾಗಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಘೋಷಣೆಯಾಗುವ ಸಾಧ್ಯತೆಯಿದೆ. ಹೆಚ್ಚಿದ ಸಂಬಳದ ಮೊತ್ತ ಸೆಪ್ಟೆಂಬರ್ 30 ರ ಪಾವತಿಗಳೊಂದಿಗೆ ಕೇಂದ್ರ ಉದ್ಯೋಗಿಗಳ ಬ್ಯಾಂಕ್ ಖಾತೆಗಳಿಗೆ ಬರುತ್ತದೆ ಎಂದು ವರದಿಯಾಗಿದೆ.

ನಿರೀಕ್ಷಿತ ಡಿಎ ಅಂಕಿಅಂಶವನ್ನು ಆಧರಿಸಿದ ಲೆಕ್ಕಾಚಾರಗಳ ಪ್ರಕಾರ, ರೂ. 31,550 ರ ಮೂಲ ವೇತನ ಹೊಂದಿರುವ ಉದ್ಯೋಗಿಗಳು ವಾರ್ಷಿಕವಾಗಿ ರೂ 15,144 ಹೆಚ್ಚಳವನ್ನು ಪಡೆಯುತ್ತಾರೆ. ಮತ್ತೊಂದೆಡೆ, ಗರಿಷ್ಠ 56,900 ರೂಗಳ ಮೂಲ ವೇತನವು ವಾರ್ಷಿಕವಾಗಿ ರೂ 27,312 ಹೆಚ್ಚಳವನ್ನು ಪಡೆಯುತ್ತದೆ ಎಂದು ವರದಿಯಾಗಿದೆ.

ಎಷ್ಟು ಸಂಬಳ ಹೆಚ್ಚಾಗುತ್ತೆ?
7ನೇ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆ (ಡಿಎ) ಶೇಕಡಾ 4 ರಷ್ಟು ಹೆಚ್ಚಾದರೆ ವೇತನದ ಲೆಕ್ಕಾಚಾರ ಹೀಗಿರಲಿದೆ. ಒಂದು ವೇಳೆ ನೌಕರನ ಮೂಲ ವೇತನ 56,900 ರುಪಾಯಿ ಆಗಿದ್ದರೆ ಪ್ರಸ್ತುತ ನೌಕರ 19,346 ರುಪಾಯಿ ತುಟ್ಟಿಭತ್ಯೆ ಪಡೆಯುತ್ತಿರುತ್ತಾರೆ. ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ 21,622 ರುಪಾಯಿ ಪಡೆಯಲಿದ್ದಾರೆ.

ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ವೇತನ 2,276 ರೂಪಾಯಿ ಹೆಚ್ಚಳವಾಗಲಿದೆ. ವಾರ್ಷಿಕವಾಗಿ ವೇತನ 27,312 ರೂಪಾಯಿ ಹೆಚ್ಚಳವಾಗಲಿದೆ. ಸುಮಾರು 50 ಲಕ್ಷ ಕೇಂದ್ರ ಸರ್ಕಾರದ ನೌಕರರು ಪ್ರಯೋಜನ ಪಡೆಯಲಿದ್ದಾರೆ.

ಎಂಟು ವರ್ಷಗಳಲ್ಲೇ ಗರಿಷ್ಠ ಹಣದುಬ್ಬರ:
ಹಣದುಬ್ಬರ ಕಡಿಮೆ ಮಾಡಲು ಸರ್ಕಾರವು ಪ್ರತಿ ವರ್ಷ ಜನವರಿ ಮತ್ತು ಜುಲೈನಲ್ಲಿ ಡಿಎಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಚಿಲ್ಲರೆ ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿರುವುದರಿಂದ, ತುಟ್ಟಿಭತ್ಯೆ ಹೆಚ್ಚಳದ ಸಾಧ್ಯತೆಗಳು ಹೆಚ್ಚಾಗಿದೆ. ಏಪ್ರಿಲ್‌ನಲ್ಲಿ ಸಿಪಿಐ ಆಧಾರಿತ ಹಣದುಬ್ಬರ ಎಂಟು ವರ್ಷಗಳ ಗರಿಷ್ಠ ಶೇಕಡಾ 7.79 ರಷ್ಟಕ್ಕೆ ಏರಿಕೆಯಾಗಿದೆ.

ಕೇಂದ್ರ ಸರ್ಕಾರ ನೌಕರ ನಗರ ವಲಯದಲ್ಲಿ, ಅರೆ ನಗರ ವಲಯದಲ್ಲಿ ಅಥವಾ ಗ್ರಾಮೀಣ ವಲಯದಲ್ಲಿ ಕೆಲಸ ಮಾಡುತ್ತಾರೆಯೇ ಎಂಬುದರ ಆಧಾರದ ಮೇಲೆ ತುಟ್ಟಿಭತ್ಯೆ ಪ್ರಮಾಣ ಉದ್ಯೋಗಿಯಿಂದ ಉದ್ಯೋಗಿಗೆ ಬದಲಾಗುತ್ತದೆ.

Leave a Comment

Your email address will not be published. Required fields are marked *