ಸಮಗ್ರ ನ್ಯೂಸ್: ದ.ಕ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಯುವಕನೋರ್ವ ತಲ್ವಾರ್ ಹಿಡಿದು ಊರಿಡೀ ಸುತ್ತಾಡಿದ ಘಟನೆ ಸುಳ್ಯ ತಾಲೂಕಿನ ಕನಕಮಜಲಿನಲ್ಲಿ ನಡೆದಿದೆ.
ಇಲ್ಲಿನ ಸಂದೀಪ್ ಎಂಬಾತ ಘಟನೆಗೆ ಕಾರಣಕರ್ತ ವ್ಯಕ್ತಿ ಎಂದು ತಿಳಿಸಿದು ಬಂದಿದೆ. ದುಷ್ಕರ್ಮಿಗಳಿಂದ ಕೊಲೆಯಾದ ಪ್ರವೀಣ್ ನೆಟ್ಟಾರುರವರಿಗೆ ಶ್ರದ್ದಾಂಜಲಿ ಕುರಿತ ಬ್ಯಾನರ್ ವಿಚಾರದಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಕನಕಮಜಲು ಪೇಟೆಯಲ್ಲಿ ಪ್ಲಾಸ್ಟಿಕ್ ಬ್ಯಾನರ್ ಹಾಕಲು ಅನುಮತಿ ಇಲ್ಲದೇ ಇದ್ದು, ಪ್ರವೀಣ್ ರ ಶ್ರದ್ದಾಂಜಲಿ ಬ್ಯಾನರ್ ಅನ್ನು ಬಟ್ಟೆಯಲ್ಲಿ ಹಾಕಲು ತಿಳಿಸಲಾಗಿತ್ತಾದರೂ ಕನಕಮಜಲಿನ ಸಂದೀಪ್ ಮತ್ತು ಕೆಲವರು ಪ್ಲಾಸ್ಟಿಕ್ ಬ್ಯಾನರ್ ಅಳವಡಿಸಿದ್ದರು. ಇದನ್ನು ಪಂಚಾಯತ್ ನಿರ್ದೇಶನದಂತೆ ತೆರವುಗೊಳಿಸಲಾಗಿದ್ದು, ಇದರಿಂದ ಕೋಪಗೊಂಡ ಸಂದೀಪ್ ಎಂಬಾತ ತಲ್ವಾರ್ ಪ್ರದರ್ಶನ ನಡೆಸಿದ್ದಾನೆ ಎಂದು ತಿಳಿದುಬಂದಿದೆ. 144 ಸೆಕ್ಷನ್ ಜಾರಿಯಿದ್ದರೂ ಈ ರೀತಿಯ ಕೃತ್ಯ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.