ಸುಳ್ಯ: ತಾಲೂಕಿನ ಮಿತ್ತಮಜಲು ಎಂಬಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತ ಗೊಳಿಸಿದೆ.
ದಿನಾಂಕ 13/05/2020 ರಂದು ನೆಲ್ಲೂರು ಕೆಮ್ರಾಜೆ ಗ್ರಾಮದ ಚೇತನ್ ಕುಮಾರ್ ಎಂಬುವವರು ತನ್ನ ವಾಹನದಲ್ಲಿ ಸುಳ್ಯ ಕಡೆಯಿಂದ ಶಶಿಕಾಂತ್ ಎಂಬುವವನನ್ನು ಕೂರಿಸಿಕೊಂಡು ಬರುತ್ತಿದ್ದರು.
ಈ ಸಂದರ್ಭ ಮಿತ್ತಮಜಲ್ ನಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ಪಿಕ್ ಅಪ್ ವಾಹನದ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದು ಚೇತನ್ ಕುಮಾರ್ ಎಂಬುವವರ ಬೈಕ್ ಡಿಕ್ಕಿ ಹೊಡೆದಿದೆ.
ಈ ಪರಿಣಾಮ ಬೈಕ್ ಸವಾರ ಚೇತನ್ ಕುಮಾರರ ಕಾಲು, ಕೈ ಮತ್ತು ಹೊಟ್ಟೆ ಹಾಗೂ ಸಹ ಸವಾರ ಶಶಿಕಾಂತರ ತಲೆ ಮತ್ತು ಮುಖಕ್ಕೆ ಗಾಯವಾಗಿದ್ದು ಅವರನ್ನು ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೊಳಪಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಶಿಕಾಂತ ನನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಈ ಅಪಘಾತವು ಪಿಕ್ ಅಪ್ ವಾಹನದ ಚಾಲಕನ ತಪ್ಪಿನಿಂದ ಸಂಭವಿಸಿದೆ ಎಂದು ಆರೋಪಿಸಿ ಚೇತನ್ ಕುಮಾರ್ ರವರ ಸಂಬಂಧಿ ಗಂಗಾಧರ್ ನೀಡಿದ ದೂರಿನ ಆಧಾರದಲ್ಲಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 279,337,338 ಜೊತೆಗೆ 146, ಮತ್ತು 196 ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ಶಿಕ್ಷಾರ್ಹವಾದ ಅಪರಾಧವೆಸಗಿ ಪ್ರಸ್ತುತ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಆರೋಪವನ್ನು ಅಭಿಯೋಜನೆಯು ಸಾಬೀತುಪಡಿಸಲು ವಿಫಲವಾಗಿದೆ ಎಂದು ಪರಿಗಣಿಸಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಸೋಮಶೇಖರ. ಎ ರವರು ಆರೋಪಿ ಪ್ರದೀಪ್ ಅವರನ್ನು ದೋಷಯುಕ್ತಗೊಳಿಸಿ ತೀರ್ಪು ನೀಡಿರುತ್ತಾರೆ.
ಆರೋಪಿ ಪರವಾಗಿ ನ್ಯಾಯವಾದಿಗಳಾದ ಜಗದೀಶ್ ದಾಸನಕಜೆ ಹಾಗೂ ಸಂದೀಪ್ ಮೊಟ್ಟೆಮನೆ ವಳಲಂಬೆ ಇವರು ವಾದಿಸಿದ್ದರು