Ad Widget .

ಇಲ್ಲಿದೆ ಮೊಹರಂ ಹಬ್ಬದ ಇತಿಹಾಸ ಮತ್ತು ಮಹತ್ವ

ಸಮಗ್ರ ನ್ಯೂಸ್: ರಂಜಾನ್ ನಂತರ ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಪವಿತ್ರ ತಿಂಗಳು. ಹೀಗಾಗಿ ಮೊಹರಂ ಅನ್ನು ಹಿಜ್ರಿ ಎಂದೂ ಸಹ ಕರೆಯುತ್ತಾರೆ. ಮೊಹರಂ ಇಸ್ಲಾಂನಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿರುವ ತಿಂಗಳು ಮತ್ತು ಮುಸ್ಲಿಂ ಸಮುದಾಯದವರು ಆಚರಿಸುವ ಪವಿತ್ರ ತಿಂಗಳುಗಳಲ್ಲಿ ಇದೂ ಒಂದು. ಮೊಹರಂ ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಹಬ್ಬ. ಈ ಹಬ್ಬದಲ್ಲಿ ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಾರೆ. ಹತ್ತು ದಿನಗಳವರೆಗೆ ಮೊಹರಂ ಆಚರಣೆ ನಡೆಯುತ್ತದೆ. ಈ ವರ್ಷ ಮೊಹರಂ ಜುಲೈ 29 ರಂದು ಪ್ರಾರಂಭವಾಗಿದೆ ಮತ್ತು ಆಗಸ್ಟ್ 28ಕ್ಕೆ ಕೊನೆಗೊಳ್ಳುತ್ತದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಗ್ರಾಮೀಣ ಭಾಗದಲ್ಲಿ ಮೊಹರಂ ಹಬ್ಬವನ್ನು ಬಾಬಯ್ಯ ಹಬ್ಬವೆಂದು ಕರೆಯುತ್ತಾರೆ. ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಹಜರತ್‌ ಹಸನ್‌ ಮತ್ತು ಹುಸೇನರ ಪುಣ್ಯ ಸ್ಮರಣೆಯ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ತಿಂಗಳಲ್ಲಿ, ಶಿಯಾ ಮುಸ್ಲಿಮರು ಯುದ್ಧಭೂಮಿಯಲ್ಲಿ ಆದ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಮರಣಕ್ಕೆ ಶೋಕಿಸುತ್ತಾರೆ.

Ad Widget . Ad Widget . Ad Widget .

ಕರ್ಬಲಾ ಯುದ್ಧವು ಇಮಾಮ್ ಹುಸೇನ್ ಮತ್ತು ಉಮಯ್ಯದ್ ಖಲೀಫ್ ಯಾಜಿದ್ I ನಡುವೆ ನಡೆಯಿತು. ಯುದ್ಧದ ಸಮಯದಲ್ಲಿ, ಇಮಾಮ್ ಹುಸೇನ್ ರನ್ನು ಮೋಸದಿಂದ ಕೊಲ್ಲಲಾಯಿತು. ಅವರ ಹುತಾತ್ಮತೆಯನ್ನು ಅಶುರಾ ಎಂದು ಕರೆಯಲಾಗುವ ಈ ತಿಂಗಳ ಹತ್ತನೇ ದಿನದಂದು ಶೋಕ ಮೆರವಣಿಗೆಗಳೊಂದಿಗೆ ಆಚರಿಸಲಾಗುತ್ತದೆ.

ಕರ್ಬಲಾ ಯುದ್ಧದಲ್ಲಿ ಇಮಾಮ್ ಹುಸೇನ್ ಅವರು ಮರಣ ಹೊಂದುತ್ತಾರೆ. ಮೊಹರಂ 10ನೇ ದಿನ ಇದರ ದುಃಖವನ್ನು ವ್ಯಕ್ತಪಡಿಸುತ್ತ ಮೆರವಣಿಗೆಗಳನ್ನು ನಡೆಸುತ್ತಾರೆ. ಅಂದು ಶಿಯಾ ಪಂಗಡದ ಮುಸ್ಲಿಮರು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ “ಯಾ ಅಲಿ” ಮತ್ತು “ಯಾ ಹುಸೇನ್” ಎಂದು ಜಪಿಸುತ್ತ ದೇಹ ದಂಡಿಸುತ್ತಾರೆ. ಶಿಯಾ ಮುಸ್ಲಿಮರಿಗೆ, ಮೊಹರಂ ತಿಂಗಳು, ಪ್ರವಾದಿ ಮೊಹಮ್ಮದ್ ಪೈಗಂಬರ್ರ ಮೊಮ್ಮಗ ಹುಸೇನ್ ಇಬ್ನ್ ಅಲಿಯ ಸಾವನ್ನು ನೆನಪಿಸುತ್ತದೆ. ಖಲೀಫಾ ಯಜಿದ್ನಿಂದ ಕ್ರಿಸ್ತಶಕ 680 ರಲ್ಲಿ ಆಶುರಾ ದಿನದಂದು ಕರುಬಲಾ ಎಂಬ ಮರುಭೂಮಿಯಲ್ಲಿ ನಡೆದ ತುಮುಲ ಯುದ್ಧದಲ್ಲಿ ಹುಸೇನ್ ನನ್ನು ಕೊಲ್ಲಲಾಯಿತು. ಹೀಗಾಗಿ ಅನೇಕ ಶಿಯಾಗಳು ಈ ತಿಂಗಳ ಪ್ರವಾದಿಯ ಕುಟುಂಬದ ಶೌರ್ಯವನ್ನು ನೆನಪಿಸಿಕೊಂಡು ದುಃಖಿಸುತ್ತಾರೆ. ಈ ವೇಳೆ ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ಮಾಡಲಾಗುತ್ತೆ.

Leave a Comment

Your email address will not be published. Required fields are marked *