Ad Widget .

ಕೆಎಸ್ಆರ್ ಟಿಸಿ ಡಿಪೋ ವ್ಯವಸ್ಥಾಪಕ ಸಿಬ್ಬಂದಿ ತುಷಾರ್ ನಿಧನ

ದಾವಣಗೆರೆ : ಕೆಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರ ಘಟಕ ವ್ಯವಸ್ಥಾಪಕ ಎಚ್‌.ಸಿ. ತುಷಾರ್‌ (33) ಶುಕ್ರವಾರ ಬಸ್‌ ನಿಲ್ದಾಣದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

Ad Widget . Ad Widget .

ಸಂಸ್ಥೆಯ ಸಿಬ್ಬಂದಿಯ ಹಳೆ ಪ್ರಕರಣವೊಂದರ ವಿಚಾರಣೆ ಸಂಬಂಧ ಶಿರಸಿಗೆ ಬಂದಿದ್ದ ಅವರು, ಬೆಂಗಳೂರಿಗೆ ವಾಪಸ್ಸಾಗುವಾಗ ಮಾರ್ಗ ಮಧ್ಯೆ ದಾವಣಗೆರೆಯ ಬಸ್‌ ನಿಲ್ದಾಣದಲ್ಲಿ ನಿಧನರಾಗಿದ್ದಾರೆ.

Ad Widget . Ad Widget .

ತಲೆ ಸುತ್ತು ಕಾಣಿಸಿಕೊಂಡು ಆಯಾಸಗೊಂಡಿದ್ದ ಅವರನ್ನು ಬಸ್‌ನ ನಿರ್ವಾಹಕರು ಆಸ್ಪತ್ರೆಗೆ ಕರೆದೊಯ್ಯಲು ಅಣಿಯಾಗುತ್ತಿದ್ದಂತೆಯೇ, ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅವರಿಗೆ ಪತ್ನಿ ಹಾಗೂ 4 ತಿಂಗಳ ಮಗು ಇದ್ದು, ಮೃತದೇಹವನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಎಂಬ ಮಾಹಿತಿ ದೊರಕಿವೆ.

Leave a Comment

Your email address will not be published. Required fields are marked *