ಸಮಗ್ರ ನ್ಯೂಸ್: ಕಸ್ತೂರಿರಂಗನ್ ವರದಿ ವಿರೋಧಿಸಿ ಮಲೆನಾಡಿನ ಶಾಸಕರ ನಿಯೋಗಕ್ಕೆ ಕೊನೆಗೂ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ನೇತೃತ್ವದ ಮಲೆನಾಡಿನ ಶಾಸಕರ ನಿಯೋಗವು ಕಸ್ತೂರಿರಂಗನ್ ವರದಿ ಮಾಡಿದ ಪ್ರಕ್ರಿಯೆಯಲ್ಲಿ ಲೋಪ ಇದೆ ಎಂದು ದೂರು ಸಲ್ಲಿಸಿತ್ತು. ಹೀಗಾಗಿ ಕ್ಯಾಬಿನೆಟ್ ಸಬ್ ಕಮಿಟಿ ರಚಿಸಲು ಮನವಿ ಸಲ್ಲಿಸಿತ್ತು.
ಈಗ ಇದಕ್ಕೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಒಪ್ಪಿಗೆ ನೀಡಿದ್ದಾರೆ. ಪಶ್ಚಿಮ ಘಟ್ಟದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಹೊಸ ವರದಿ ತಯಾರಿಸಲು ಹೊಸ ಕಮಿಟಿ ರಚನೆಗೆ ಸಮ್ಮತಿ ನೀಡಿದ್ದಾರೆ.
ಈಗಾಗಲೇ ಕಮಿಟಿ ತಯಾರಿದೆ ಅತೀ ಶೀಘ್ರದಲ್ಲಿ ರಾಜ್ಯಕ್ಕೆ ಕಮಿಟಿ ಸದಸ್ಯರು ಭೇಟಿ ನೀಡಿ ಪಶ್ಚಿಮ ಘಟ್ಟದ ಪ್ರತಿ ಹಳ್ಳಿಗೂ ಭೇಟಿ ನೀಡಲಿದ್ದಾರೆ. ಆದರೆ, ಅರಣ್ಯದ ಸಂರಕ್ಷಣೆಯ ಜತೆಗೆ ಜನರ ಜೀವನ ಮುಖ್ಯ ಎಂದು ಮಲೆನಾಡಿನ ಶಾಸಕರ ಅಭಿಪ್ರಾಯ ಪಟ್ಟಿದ್ದಾರೆ.
ಈ ನಿಯೋಗದಲ್ಲಿ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಖಾತೆಯ ಸಚಿವರಾದ ಶೋಭಾ ಕರಂದ್ಲಾಜೆ, ಗೃಹ ಸಚಿವ ಅರಗ ಜ್ಞಾನೇಂದ್ರ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜ್ಯ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಹಾಗೂ ಸಂಸದ ನಳೀನ್ ಕುಮಾರ್ ಕಟೀಲ್, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಭಾರತೀಯ ಜನತಾ ಪಕ್ಷದ ರಾಷ್ಡ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕರೂ ಆದ ಸಿ.ಟಿ.ರವಿ,ಸಂಸದ ಪ್ರತಾಪ್ ಸಿಂಹ, ಕೋಲಾರ ಸಂಸದ ಮುನಿಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಸಾಗರ ಶಾಸಕ ಹರತಾಳು ಹಾಲಪ್ಪ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಪ್ರಸಾದ್ ಇದ್ದರು.