ಸಮಗ್ರ ನ್ಯೂಸ್: ಜನಸಾಮಾನ್ಯರ ಸೇವೆ ಮಾಡಬೇಕಾದ ಶಾಸಕರು ಕೇವಲ ಕಾರ್ಯಕರ್ತರ ಸೇವೆ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದರು. ಅವರು ಜು. 21 ರಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆದು ಶಾಸಕರಾಗಿ ಹಾಗೂ ಸಚಿವರಾಗಿ ಸುಳ್ಯದಲ್ಲಿ ಎಸ್ ಅಂಗಾರ ಆಯ್ಕೆಯಾಗಿದ್ದಾರೆ. ಇವರು ಪಕ್ಷದ ಸೇವೆ ಮಾಡುವುದು ಮಾತ್ರವಲ್ಲದೆ ಜನಸಾಮಾನ್ಯರ ಸೇವೆ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವ ನಾವು ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ .
ಪಕ್ಷದಲ್ಲಿ ಗೆದ್ದ ನಂತರ ಪಕ್ಷಕ್ಕೆ ಸೀಮಿತವಾಗದೆ ಇರುವುದು ಉತ್ತಮ. ಇತ್ತೀಚೆಗೆ ಮಾಧ್ಯಮದಲ್ಲಿ ವರದಿಯಾದಂತೆ ಆಲೆಟ್ಟಿ ಗ್ರಾಮದ ರಾಮಚಂದ್ರ ನಾಯ್ಕ್ ಎಂಬವರು ಅಂಗವಿಕಲರಾಗಿದ್ದರಿಂದ ಪರಿಶಿಷ್ಟ ವರ್ಗದ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಅವಕಾಶ ಕೊಟ್ಟಿದ್ದು ಅದರ ಅನುಮತಿ ಕೇಳಲು ಸಚಿವ ಅಂಗಾರ ಹತ್ತಿರ ಹೋದಾಗ ಒಪ್ಪದೆ ಇದ್ದಾಗ ಸುಂದರ ಪಾಟಾಜೆ ಮುಖೇನ ಕಛೇರಿಗೆ ಕರೆ ಮಾಡಿ ಮಾತಾಡಿದಾಗ ಗ್ರಾಮಸ್ಥರು ಇದಕ್ಕೆ ಒಪ್ಪುವುದಿಲ್ಲ ಹಾಗೂ ರಾಮಚಂದ್ರ ಕಾಂಗ್ರೆಸ್ ಪಕ್ಷದವರು ಎಂದು ಹೇಳಿದ್ದರು. ಇದರಿಂದ ಯೋಜನೆಗೆ ಅನುಮೋದನೆ ಸಿಗದೆ ಇನ್ನು ಹಲವು ವರ್ಷಗಳ ಕಾಲ ಗಂಗಾ ಕಲ್ಯಾಣ ಯೋಜನೆಗೆ ಕಾಯಬೇಕಾಗಿ ಬಂದಿದೆ. ಜನಸಾಮಾನ್ಯರಿಗೆ ಸಹಾಯ ಮಾಡಬೇಕಾದವರು ಕೇವಲ ಬಿಜೆಪಿ ಗೆ ಸಹಾಯ ಮಾಡುತ್ತಿದ್ದಾರೆ ಹಾಗೂ ಸರ್ಕಾರದ ಹಣವನ್ನು ಪಕ್ಷದ ಜನರಿಗೆ ಮಾತ್ರ ಕೊಡುವುದನ್ನು ಖಂಡಿಸುತ್ತೇವೆ ಎಂದರು.
ಈ ವೇಳೆ ಸಾಧನಾ ಸಮಾವೇಶ ಮಾಡುವ ಬದಲು ಕರ್ನಾಟಕ ರಾಜ್ಯದ ಕ್ಷಮಾಪಣೆ ಸಮಾವೇಶ ಮಾಡುವುದು ಉತ್ತಮ. ಈ ಜಿಲ್ಲೆ ಎಲ್ಲಾ ಧರ್ಮದವರು ಶೈಕ್ಷಣಿಕವಾಗಿ ಮುಂದಿದ್ದಾರೆ ಆದರೆ ಇತ್ತೀಚೆಗೆ ಶಾಲೆ ಕಾಲೇಜುಗಳಲ್ಲಿ ದ್ವೇಷ ಉಂಟು ಮಾಡುವಲ್ಲಿ ಪಕ್ಷ ಮಾಡುತ್ತಿದೆ, ಹಾಗೂ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸಿದೆ ಹೊರತು ಬೇರೇನೂ ಮಾಡಲಿಲ್ಲ. ಪಠ್ಯದ ಪುಸ್ತಕ ಬದಲಾವಣೆ ಮಾಡುವುದರಲ್ಲಿ ಅನೇಕ ಸಾಧಕ ವ್ಯಕ್ತಿಗಳಿಗೆ ಅವಮಾನ ಮಾಡಿದ್ದು ಸಾಧನೆ ಅಲ್ಲ ಹಾಗೂ ಸರ್ಕಾರಿ ಕಛೇರಿಯಲ್ಲಿ ಪೋಟೋ ವೀಡಿಯೋ ಮಾಡಬಾರದು ಎಂಬುದು ತಪ್ಪು, ಇದೆಲ್ಲ ಸಾಧನಾ ಸಮಾವೇಶ ಅಲ್ಲ ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ ಹೇಳಿದರು.
ಕಾಂಗ್ರೆಸ್ ಈ ರೀತಿ ಮಾಡಿದ್ದಲ್ಲಿ ಬಿಜೆಪಿ ಬಿಕ್ಷೆ ಬೇಡುವ ಪರಿಸ್ಥಿತಿ ಬರುತ್ತಿತ್ತು ಎಂದು ನ.ಪಂ ವಿರೋಧ ಪಕ್ಷದ ನಾಯಕ ಎಂ ವೆಂಕಪ್ಪ ಗೌಡ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಪ್ರಮುಖರು ಭಾಗಿಯಾಗಿದ್ದರು.