Ad Widget .

ಸುಳ್ಯ: ಗಣಿಗಾರಿಕೆಯಿಂದ ಮತ್ತೇ ಸಂಕಷ್ಟಕ್ಕೆ ಒಳಗಾದ ಸ್ಥಳೀಯರು|
ಮನವಿ ಕೊಟ್ಟರು ಅಧಿಕಾರಿಗಳು ಯಾಕಿಷ್ಟು ಮೌನ?

ಸಮಗ್ರ ನ್ಯೂಸ್: ಗಣಿಗಾರಿಕೆಯಿಂದ ಮತ್ತೆ ಅಕ್ಕಪಕ್ಕದ ಮನೆಗಳಿಗೆ ಹಾನಿಯಾದ ಘಟನೆ ದ.ಕ‌ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅಳವುಪಾರೆಯಲ್ಲಿ ನಡೆದಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಗಣಿಗಾರಿಗೆ ನಿಲ್ಲಿಸುವಂತೆ ಜು.16ರಂದು ಮನವಿ ಸಲ್ಲಿಸಲಾಯಿತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೆಲವು ವರ್ಷಗಳಿಂದ ಅಳವುಪಾರೆಯಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಅಕ್ಕಪಕ್ಕದ ಮನೆಗಳಿಗೆ, ಶಾಲೆ ಮತ್ತು ದೇವಸ್ಥಾನಕ್ಕೆ ಹಾನಿಯಾಗಿರುವ ಬಗ್ಗೆ ವರದಿಯಾಗಿತ್ತು. ಅಲ್ಲದೆ ಅಲ್ಲಿಯ ಕೆಲವು ಸಂಘಟನೆಗಳು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದರು. ಇದೇ ವೇಳೆಗೆ ಸುಳ್ಯ ಹಾಗೂ ಮಡಿಕೇರಿ ಭಾಗದಲ್ಲಿ ಭೂ ಕಂಪನ ಕೂಡ ಉಂಟಾಗಿತ್ತು. ಈ ವೇಳೆ ಮರ್ಕಂಜ ಜನತೆ ಮತ್ತಷ್ಟು ಭಯ ಭೀತರಾಗಿದ್ದರು.

Ad Widget . Ad Widget . Ad Widget .

ಈ ವೇಳೆ ಗಣಿ ಇಲಾಖೆಯವರು ಸ್ಥಳ ಬೇಟಿ ಮಾಡಿ ಮಹಜರು ಕೂಡ ನಡೆಸಿದ್ದಾರೆ. ಅದಾದ ಬಳಿಕ ಅಂಬೇಡ್ಕರ್ ರಕ್ಷಣಾ ವೇದಿಕೆ ಮತ್ತು ಸ್ಥಳೀಯರು ಸೇರಿ ಅಳವುಪಾರೆಯಲ್ಲಿ ಧರಣಿ ಕೂಡ ನಡೆಸಿದ್ದರು. ಇದೇ ವೇಳೆ ಸ್ಥಳೀಯ ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒ ಸ್ಥಳಕ್ಕೆ ಬೇಟಿ ನೀಡಿ ತಾತ್ಕಾಲಿಕವಾಗಿ ಗಣಿ ನಿಲ್ಲಿಸುವಂತೆ ಗಣಿ ಮಾಲೀಕರ ಜೊತೆ ಮಾತನಾಡುವುದಾಗಿ ಹೇಳಿದ್ದರು. ಅದೇ ರೀತಿ ಕೆಲ ದಿನಗಳ ನಂತರ ಗಣಿ ಕೂಡ ಬಂದ್ ಆಗಿತ್ತು.

ಅದರೆ ಇದೀಗ ಭಾರಿ ಪ್ರಮಾಣದ ಸದ್ದಿನೊಂದಿಗೆ ಸ್ಫೋಟಕಗಳನ್ನು ಬಳಸುತ್ತಾ ಮತ್ತೆ ಗಣಿಗಾರಿಗೆ ಪ್ರಾರಂಭಿಸಿದ್ದು, ಮತ್ತೆ ಸ್ಥಳೀಯರು ಸಮಸ್ಯೆಯನ್ನು ಎದುರಿಸುವಂತಾಗಿದೆ.

ಮರ್ಕಂಜ ಗ್ರಾಮದ ಕಾಳಮನೆ ನಿವಾಸಿಯಾದ ಆನಂದ ಕೆ. ಎಂಬವವರು ಸಮಗ್ರ ಸಮಾಚಾರದೊಂದಿಗೆ ಮಾತನಾಡಿ `ನಮ್ಮ ಮನೆಯ 150 ಮೀ ರಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಜು.14ರಂದು ಸಂಜೆ ಕ್ರಶರ್ ಸ್ಫೋಟದಿಂದ ನಮ್ಮ ಮನೆಯ ಬಿರುಕು ಬಿಟ್ಟಿದೆ. ಕೊಟ್ಟಿಗೆಯ ಕೆಲ ಹಂಚುಗಳು ನೆಲ ಸಮವಾಗಿದೆ. ನಮ್ಮಲ್ಲಿ ಕಾಲೇಜು ಹೋಗುವ ವಿದ್ಯಾರ್ಥಿಗಳು ಇದ್ದು ಇವರಿಗೆ ಓದಲು ಕೂಟ ತೊದರೆಯಾಗುತ್ತಿದೆ. ಅಲ್ಲದೆ ಬೇಸಿಗೆ ಸಮಯದಲ್ಲಿ ಗಣಿ ದೂಳಿನಿಂದ ನಾವು ಕುಡಿಯಲು ಉಪಯೋಗಿಸುವ ಬಾವಿ ನೀರು ಕೂಡ ಮಲೀನವಾಗುತ್ತಿದೆ. ಇದರಿಂದ ನಮಗೆ ನೀರು ಕುಡಿಯಳು ಅಗುತ್ತಿಲ್ಲ.’ ಎಂದು ಹೇಳಿಕೊಂಡಿದ್ದಾರೆ.

ಇನ್ನೂ ಈ ವಿಚಾರವನ್ನು ಗಣಿ ನಡೆಸುತ್ತಿರುವವರ ಜೊತೆ ಹೇಳಿದಾಗ “ಗಣಿ ಇಲಾಖೆಯಿಂದ ನಮಗೆ ಪರವಾಣಿಗೆ ನೀಡಿದ್ದು, ನಾವು ಹೇಗೆ, ಯಾವಾಗ ಬೇಕಾದರು ಸ್ಫೋಟಕಗಳನ್ನು ಸಿಡಿಸುತ್ತೇವೆ” ಎಂದಿದ್ದಾರೆ.

ಈ ಬಗ್ಗೆ ಸುಳ್ಯ ತಹಶೀಲ್ದಾರರಿಗೆ ಮನವಿ ನೀಡಿದ್ದು ತಕ್ಷಣ ಈ ಕಲ್ಲು ಕೋರೆಯನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅದರೆ ಇಷ್ಟೆಲ್ಲ ಜನರು ಮಾಡಿಕೊಂಡರು ಅಧಿಕಾರಿಗಳು ಯಾಕಿಷ್ಟು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವುದೇ ಪ್ರಶ್ನೆಯಾಗಿಯೇ ಉಳಿದಿದೆ.

Leave a Comment

Your email address will not be published. Required fields are marked *