ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಕರೆಂಟ್ ನಾಪತ್ತೆಯಾಗಿದ್ದು, ಜನರು ಪರದಾಡುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಜನರ ಮುಂದಿಟ್ಟರೆ ಇದಕ್ಕಿಂತ ಮೊದಲು ಮಾಡಿದ ಕೆಲಸಗಳನ್ನು ಹೇಳಿ ಎಂದು ಮೀನುಗಾರಿಕಾ ಸಚಿವರು 6 ಬಾರಿ ಶಾಸಕರೂ ಆಗಿರುವ ಎಸ್ ಅಂಗಾರರು ಗರಂ ಆಗ್ತಾರೆ. ಕ್ಷೇತ್ರದಲ್ಲಿ ನಿರಂತರ ಎರಡನೇ ದಿನವೂ ದಿನಪೂರ್ತಿ ಕರೆಂಟ್ ನಾಪತ್ತೆಯಾಗಿದ್ದು ಜನರು ಬಸವಳಿದು ಹೋಗಿದ್ದಾರೆ.
ಸುಳ್ಯದ ಜನತೆ ವಿದ್ಯುತ್ ಸಮಸ್ಯೆ ಮುಗಿಯದ ಕರೆಯಾಗಿದೆ. ಜು 16ರಂದು ದಿನಪೂರ್ತಿ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ ದಿನಪೂರ್ತಿ ವಿದ್ಯುತ್ ನಾಪತ್ತೆಯಾಗಿತ್ತು. ರಾತ್ರಿಯೂ ವಿದ್ಯುತ್ ಇಲ್ಲದೆ ಜನರು ಕತ್ತಲಲ್ಲಿ ಕಳೆಯುವಂತಾಗಿದೆ.
ರಾತ್ರಿ ಒಂಭತ್ತು ಗಂಟೆಯಾದರೂ ವಿದ್ಯುತ್ ಸಂಪರ್ಕ ಸರಿಪಡಿಸಲಾಗಿಲ್ಲ. ಆನೆಗುಂಡಿಯಲ್ಲಿ ಮರ ಮುರಿದು ಬಿದ್ದ ಕಾರಣ ಮೈನ್ ಲೈನ್ ವಿದ್ಯುತ್ ಸರಬರಾಜು ಇಲ್ಲದೆ ಸಮಸ್ಯೆ ಆಗಿದೆ. ಮೈನ್ ಲೈನ್ ಚಾರ್ಜ್ ಮಾಡಲಾಗಿದೆ. ನಗರ ವ್ಯಾಪ್ತಿಯ ಫೀಢರ್‌ನಲ್ಲಿ ಸಮಸ್ಯೆ ಇದೆಯಾ ಎಂದು ಚೆಕ್ ಮಾಡ್ತಾ ಇದ್ದೇವೆ ಎಂದು ಸುಳ್ಯದ ಮೆಸ್ಕಾಂ ಕಚೇರಿ ಹೇಳಿದೆ.
ನಿರಂತರ ಎರಡನೇ ದಿನ ವಿದ್ಯುತ್ ಕಡಿತಗೊಂಡು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರವೂ ದಿನಪೂರ್ತಿ ಕರೆಂಟ್ ಇರಲಿಲ್ಲ. ರಾತ್ರಿ ಒಂಭತ್ತು ಗಂಟೆಯ ಬಳಿಕ ವಿದ್ಯುತ್ ಸಂಪರ್ಕ ನೀಡಿದರೂ ಇಂದು ಬೆಳಿಗ್ಗಿನಿಂದ ವಿದ್ಯುತ್ ಕಡಿತವಾಗಿದೆ. ವಿದ್ಯುತ್ ಇಲ್ಲದೆ ಹಲವು ಕಡೆಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ.
ಮಳೆಗಾಲ ಆರಂಭಗೊಂಡ ಬಳಿಕ ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು ಗ್ರಾಮೀಣ ಪ್ರದೇಶ ಮಾತ್ರವಲ್ಲದೇ ನಗರದಲ್ಲಿಯೂ ಜನರು ವಿದ್ಯುತ್ ಇಲ್ಲದೆ ಕೈ ಹೊತ್ತು ಕುಳಿತುಕೊಳ್ಫುವ ಸ್ಥಿತಿ ನಿರ್ಮಾಣವಾಗಿದೆ. ಸುಳ್ಯ ನಗರದಲ್ಲಿ ಎರಡು ದಿನ ಹಗಲು ಹಲವು ಬಾರಿ ವಿದ್ಯುತ್ ಕಡಿತವಾಗಿತ್ತು. ಕತ್ತಲಾದ ಬಳಿಕವೂ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಕಳೆಯುವಂತಾಗಿದೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುವ ಸ್ಥಿತಿ ಉಂಟಾಗಿದೆ.