ಸಮಗ್ರ ನ್ಯೂಸ್: ರಸ್ತೆ ಅಭಿವೃದ್ಧಿಗಾಗಿ ಚುನಾವಣೆಯ ಬಹಿಷ್ಕಾರ ಬ್ಯಾನರ್ ಅಳವಡಿಸಿದನ್ನು ಯಾರೋ ಕಿಡಿಗೇಡಿಗಳು ತೆರವು ಮಾಡಿದ ಘಟನೆ ಅರಂತೋಡು ಎಲಿಮಲೆ ಭಾಗದಿಂದ ವರದಿಯಾಗಿದೆ.
ಅರಂತೋಡು-ಎಲಿಮಲೆ ರಸ್ತೆ ಅಭಿವೃದ್ಧಿಗೆ ಅಗ್ರಹಿಸಿ ಕಳೆದ 2 ತಿಂಗಳ ಹಿಂದೆ ರಸ್ತೆಯುದ್ಧಕ್ಕೂ 26 ಕಡೆ ಈ ರಸ್ತೆಯ ನೊಂದ ಪಲಾನುಭವಿಗಳು ಹಾಕಿದ್ದ ಅಡ್ತಲೆಯ ಚುನಾವಣಾ ಬಹಿಷ್ಕಾರದ ಬ್ಯಾನರ್ ಗಳ ಪೈಕಿ ಹೆದ್ದಾರಿಗೆ ಕಾಣುವಂತೆ ವೈ ಎಮ್ ಕೆ ರಸ್ತೆ ಕ್ರಾಸ್ ಬಳಿ ಹಾಕಿದ್ದರು. ಈ ಬ್ಯಾನರ್ ಗಳನ್ನು ಕಳೆದ(ಜು.11) ರಾತ್ರಿ ಯಾರೋ ಕಿಡಿಗೇಡಿಗಳು ತೆರವು ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಡಿಕೇರಿಯಿಂದ ಸಂಪಾಜೆ, ಸುಳ್ಯ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿರುವ ಹಿನ್ನೆಲೆ ಸುಳ್ಯ ತಾಲೂಕಿನಲ್ಲಿ ಆಗಿರುವ, ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಜನಪ್ರತಿನಿಧಿಗಳ ಕಾರ್ಯ ವೈಖರಿ ಕಾಣದಿರಲಿ ಎಂದು ತೆರವು ಮಾಡಿರಬಹುದು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಅಲ್ಲದೆ ಬ್ಯಾನರ್ ತೆರವು ಮಾಡಬಹುದು ಅದರೆ ಜನರ ಮನಸ್ಸಿಂದ ಭಾವನೆಗಳನ್ನು ತೆರವು ಮಾಡಲು ಸಾಧ್ಯವೇ? ಎಂದು ಜನರು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.