ಸಮಗ್ರ ನ್ಯೂಸ್: ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ತಾವು ಕನ್ಸರ್ವೇಟಿವ್ ಪಕ್ಷದ ಮುಂದಿನ ನಾಯಕ ಮತ್ತು ಯುಕೆ ಪ್ರಧಾನಿ ಅಭ್ಯರ್ಥಿ ಎಂದು ಶುಕ್ರವಾರ ಘೋಷಣೆ ಮಾಡಿದ್ದಾರೆ.
ಬ್ರಿಟನ್‌ನ ಪ್ರಧಾನಿ ಹುದ್ದೆಗೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದು, ನಾಯಕತ್ವದ ಸ್ಪರ್ಧೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ.
ಬೋರಿಸ್ ಜಾನ್ಸನ್ ಅವರ ನಾಯಕತ್ವವನ್ನು ವಿರೋಧಿಸಿ ಸುನಕ್ ಅವರು ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸುನಕ್ ಅವರು ತಾವು ಕನ್ಸರ್ವೇಟಿವ್ ಪಕ್ಷದ ಬ್ರಾಂಡ್ ಅನ್ನು ರಕ್ಷಿಸುವ ಹಾಗೂ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವ ಅನುಭವ ಹೊಂದಿರುವುದಾಗಿ ರಿಷಿ ಸುನಕ್ ಹೇಳಿದ್ದಾರೆ.
ಬೋರಿಸ್ ಜಾನ್ಸನ್ ಅವರ ನಾಯಕತ್ವವನ್ನು ವಿರೋಧಿಸಿ 50ಕ್ಕೂ ಹೆಚ್ಚು ಸಂಸದರು ರಾಜೀನಾಮೆ ನೀಡಿದ ನಂತರ ರಾಜೀನಾಮೆ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.