ಸಮಗ್ರ ನ್ಯೂಸ್: ಶನಿವಾರ ಬೆಳ್ಳಂಬೆಳಿಗ್ಗೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭೂಕಂಪನದ ಅನುಭವವಾಗಿದೆ. ಬೆಳಿಗ್ಗೆ 6.22ರಿಂದ 6.23ರ ವೇಳೆಗೆ ಭೂಮಿ 10 ಸೆಕೆಂಡ್ ಗೂ ಅಧಿಕ ಸಮಯ ಕಂಪಿಸಿದೆ. ಜೊತೆಗೆ ಭಾರೀ ಶಬ್ಧ ಭೂಮಿಯೊಳಗಿಂದ ಕೇಳಿಬಂದಿತು.
ನಿದ್ರೆಯಿಂದ ಆಗ ತಾನೆ ಎದ್ದವರು, ಏಳದವರು ಭೂಮಿಯ ಕಂಪನ ಮತ್ತು ಭಾರೀ ಶಬ್ಧದಿಂದ ಬೆಚ್ಚಿ ಬಿದ್ದು ಆತಂಕದಿಂದ ಮನೆಯಿಂದ ಓಡಿ ಹೊರಬಂದರು.
ಭೂಕಂಪನದ ಕೇಂದ್ರಬಿಂದು ಯಾವುದು ಮತ್ತು ಭೂಕಂಪನದ ತೀವ್ರತೆ ಎಷ್ಟಿತ್ತು ಎಂಬುದು ಇನ್ನು ಖಚಿತವಾಗಿಲ್ಲ. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ಭೂಕಂಪನದ ಅನುಭವ ಆಗುತ್ತಿದ್ದು, ಜನರಿಗೆ ಸಾಮಾನ್ಯ ಸಂಗತಿಯಂತಾಗಿದೆ.