Ad Widget .

ಸುಳ್ಯ; ಬಿರುಕು ಬಿಟ್ಟ ಗುಳಿಕ್ಕಾನ ಪ್ರದೇಶಕ್ಕೆ ಭೇಟಿ ನೀಡಿದ ತಜ್ಞರ ತಂಡ

ಸಮಗ್ರ ನ್ಯೂಸ್ : ಬಿರುಕು ಬಿಟ್ಟು ಜನರ ಆತಂಕಕ್ಕೆ ಕಾರಣವಾದ ಸುಳ್ಯದ ಗುಳಿಕ್ಕಾನ ಪ್ರದೇಶಕ್ಕೆ ತಜ್ಞರ ತಂಡ ಭೇಟಿ ನೀಡಿದ್ದು, 2018 ರಲ್ಲಿ ಗುಳಿಕ್ಕಾನದ ಗುಡ್ಡದಲ್ಲಿ 200 ಮೀಟರ್ ದೂರದವರೆಗೆ ಭೂಮಿ ಆಳವಾಗಿ ಭಾಗ ಬಿಟ್ಟಿತು. ಈ ವೇಳೆ ಗುಳಿಕ್ಕಾನದ ಗುಡ್ಡ ಭಾಗದಲ್ಲಿ 10 ಕುಟುಂಬಗಳು ವಾಸಿಸುತ್ತಿದ್ದವು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇದೀಗ ಈ ಗುಡ್ಡ ಪ್ರದೇಶದಲ್ಲಿ ಜನ ವಾಸ ಮಾಡಲು ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸುವುದಕ್ಕೆ ತಂಡ ಆಗಮಿಸಿದೆ.

Ad Widget . Ad Widget . Ad Widget .

ಸುಳ್ಯದ ಗುಳಿಕ್ಕಾನ ಪ್ರದೇಶ ಜನ ವಾಸಿಸಲು ಯೊಗ್ಯವಾಗಿದೆಯೇ ಎಂದು ತಿಳಿಯಲು ಅಧ್ಯಯನ ತಂಡ ಆಗಮಿಸಿ ಪರಿಶೀಲನೆ ನಡೆಸಿ  ಅಧ್ಯಯನ ವರದಿ ಸರ್ಕಾರಕ್ಕೆ ಸಲ್ಲಿಸಲಿದೆ.

ಜಿಯಾಲಾಜಿಕಲ್ ಸರ್ವಿಸ್ ಆಪ್ ಇಂಡಿಯಾ ಮಿನಿಸ್ಟರಿ ಮೈನ್ಸ್ ಆಪ್ ಇಂಡಿಯಾದ ಹಿರಿಯ ಜಿಯಾಲಾಜಿಸ್ಟ್ ಅಫೀಸರ್ ಐಜಾದ್ ಅಹಮದ್ ಭಟ್, ಹಿರಿಯ ಜಿಯಾಲಾಜಿಸ್ಟ್ ಜಿ ಎಸ್ ಐ ಸೆಂಥಿಲ್ ಕುಮಾರ್ ಸುಕೋಚ್,  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಂಗಳೂರು ಉಪ ನಿರ್ದೇಶಕ ಲಿಂಗರಾಜ್ ಬಿ ಎಂ ಹಾಗೂ ಭೂ ವಿಜ್ಞಾನಿ ಶ್ರೀಮತಿ ಡಾ।ಸುಷ್ಮಾಶಶಿ ಇದ್ದರು. ಉಪ ತಹಶಿಲ್ದಾರ್ ಚಂದ್ರಕಾಂತ್ ಎಂ ಆರ್, ಆರ್ ಐ ಶಂಕರ್, ಕೊಲ್ಲಮೊಗ್ರು ಗ್ರಾ.ಪಂ ಪಿಡಿಒ ರವಿಚಂದ್ರ, ಕೊಲ್ಲಮೊಗ್ರು ಗ್ರಾಮ ಲೆಕ್ಕಾಧಿಕಾರಿ ಮಧು ಕೆ ಬಿ, ಸಹಾಯಕ ಯತಿನ್, ಗ್ರಾ.ಪಂ ಸಿಬ್ಬಂದಿ ಸಂತೋಷ್, ಸ್ಥಳೀಯ ಜನ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.

ಗುಡ್ಡ ಬಿರುಕು ಬಿಟ್ಟ ಹೊರತಾಗಿಯೂ ಅಲ್ಲಿ ಈಗಲೂ ಜನರು ವಾಸವಾಗಿದ್ದಾರೆ. ಸ್ಥಳಾಂತರಿಸಲು ಪ್ರಕ್ರಿಯೆ ಆರಂಭವಾಗಿ ನಾಲ್ಕು ವರ್ಷಗಳಾದರೂ ಈ ವರೆಗೆ ಸಾಧ್ಯವಾಗಿಲ್ಲ.

Leave a Comment

Your email address will not be published. Required fields are marked *