ಸಮಗ್ರ ನ್ಯೂಸ್: ಭೂಕಂಪದ ಭಯದ ನೆರಳಲ್ಲಿ ಬದುಕುತ್ತಿರುವ ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗದ ಜನರಿಗೆ ಈಗ ದಿನನಿತ್ಯ ಜೋರಾದ ಶಬ್ದ ಹಾಗೂ ಲಘು ಕಂಪನಗಳೊಂದಿಗೆ ಬದುಕುವಂತಾಗಿದೆ.
ಸರಣಿ ಕಂಪನ ಅನುಭವಿಸಿ ಚಿಂತೆಯಲ್ಲಿರುವ ಪೆರಾಜೆ ಹಾಗೂ ಚೆಂಬುವಿನಲ್ಲಿ ಇದೀಗ ಭಾನುವಾರ ರಾತ್ರಿ 9.15 ರಿಂದ 9.20 ರ ವೇಳೆಯಲ್ಲಿ ಕಂಪನದ ಅನುಭವ ಆಗಿದೆ ಎಂಬ ಮಾಹಿತಿ ಲಭಿಸಿದೆ.
ಭೂಮಿಯೊಡಲಿನಿಂದ ಮೊದಲಿಗೆ ಅಗೋಚರ ಶಬ್ಧ ಹಾಗೂ ನಂತರ ಸಣ್ಣ ಮಟ್ಟಿನ ಕಂಪನ ಆಗಿದೆ ಎಂದು ತಿಳಿಸಿದ್ದಾರೆ. ಹಿಂದಿನ ಕಂಪನಗಳಿಗಿಂತ ಕಡಿಮೆ ಪ್ರಮಾಣದ ಕಂಪನ ಇದಾಗಿತ್ತು ಎನ್ನಲಾಗಿದ್ದು, ಭೂಮಿಯೊಳಗೆ ಕೇಳಿಬರುವ ಸದ್ದು ಜನರ ನಿದ್ದೆಗೆಡಿಸಿದೆ. ಕಳೆದ ಕೆಲವು ದಿನಗಳಿಂದ ಕೊಡಗು ಗಡಿ ಭಾಗ ಸಂಪಾಜೆ, ಗೂನಡ್ಕ, ಅರಂತೋಡು, ಪೆರಾಜೆ, ಸುಳ್ಯ ತಾಲೂಕಿನ ಹಲವು ಕಡೆ ಕಂಪನದ ಅನುಭವ ಆಗುತ್ತಿದ್ದು, ಈ ಕುರಿತು ಶೀಘ್ರ ಅಧ್ಯಯನ ನಡೆಸಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ.