ಸಮಗ್ರ ನ್ಯೂಸ್: ತಡರಾತ್ರಿ ಭಾರಿ ಕಂಪನದಿಂದ ಭೂಮಿ ಕಂಪಿಸಿದ್ದು ಕೊಡಗು ಹಾಗೂ ದಕ್ಷಿಣ ಕನ್ನಡದ ಗಡಿ ಭಾಗದಲ್ಲಿ ಸಿಹಿನಿದ್ರೆಯಲ್ಲಿದ್ದ ಜನರು ಹೌಹಾರಿದ್ದಾರೆ.
ಭೂಕಂಪದ ತೀವ್ರತೆ 1.8ರಷ್ಟು ದಾಖಲಾಗಿತ್ತು ಎಂದು KSNDM ಕೇಂದ್ರ ಸ್ಪಷ್ಟಪಡಿಸಿದೆ. ಕಂಪನವು ಭೂಮಿಯ ೧೦ ಕಿ.ಮೀ ಅಡಿಯಲ್ಲಿ ನಡೆದಿದೆ ಎನ್ನಲಾಗಿದೆ. ಎಂ. ಚೆಂಬು ಹಾಗೂ ಪೆರಾಜೆ ಗ್ರಾಮದ ಕೇಂದ್ರ ಬಿಂದುವಿನಿಂದ ಭೂಕಂಪ ಸಂಭವಿಸಿದೆ. ಮುಂಜಾನೆ 1.15.12 ಸೆಕೆಂಡ್ ನಲ್ಲಿ ಭೂಕಂಪನ ಸಂಭವಿಸಿತ್ತು.