ಸಮಗ್ರ ನ್ಯೂಸ್: ಕೆಳವು ದಿನಗಳ ಹಿಂದಷ್ಟೇ ಭೂಕಂಪನವಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಮತ್ತೆ ಭೂಮಿ ಕಂಪಿಸಿದೆ.
ಜು 1 ರಂದು ತಡರಾತ್ರಿ1.15 ರ ಸುಮಾರಿಗೆ ಈ ಕಂಪನವಾದ ಅನುಭವವಾಗಿದೆ. ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು
2 ಸೆಕೆಂಡುಗಳ ಕಾಲ ಈ ವಿದ್ಯಮಾನ ನಡೆದಿದೆ. ಈ ವೇಳೆ ಶೀಟ್ ಗಳು, ಕಟ್ಟಡ ನಲುಗಿದ ಅನುಭವವಾಗಿದೆ.
ಸಂಪಾಜೆ, ಗೂನಡ್ಕ, ಪೆರಾಜೆ, ಅರಂಬೂರು, ಶಾಂತಿನಗರ, ಹಳೆಗೇಟು ಭಾಗದಲ್ಲಿ ಭೂಮಿ ಕಂಪಿಸಿದ್ದು ಇನ್ನು ಹಲವರಿಗೆ ದೊಡ್ಡ ಶಬ್ದದ ಅನುಭವವಾಗಿದೆ ಎಂದು ತಿಳಿದುಬಂದಿದೆ. ಗ್ರಾಮೀಣ ಪ್ರದೇಶಗಳಾದ, ತೊಡಿಕಾನ, ಅರಂತೋಡು, ಮರ್ಕಂಜ, ಕಲ್ಮಕಾರು, ಕೊಲ್ಲಮೊಗ್ರು, ಗುತ್ತಿಗಾರು, ದೇವಚಳ್ಳ, ಕೇರಳ ಗಡಿ ಗ್ರಾಮಗಳಾದ ಪಾಣತ್ತೂರು, ಕಲ್ಲಪ್ಪಳ್ಳಿ, ಮಡಿಕೇರಿ ತಾಲೂಕಿನ ಚೆಂಬು, ಸಂಪಾಜೆ, ಕರಿಕೆ ಗ್ರಾಮಗಳಲ್ಲಿ ಹಿಂದಿನ ಬಾರಿಗೆ ಹೋಲಿಸಿದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮರ್ಕಂಜದಲ್ಲಿ ಭಾರಿ ಶಬ್ದದ ಅನುಭವದ ಜೊತೆ ಭಯದ ವಾತಾವರಣ ಉಂಟಾದ ಬಗ್ಗೆ ವ್ಯಕ್ತಿಯೊಬ್ಬರು ಕರೆ ಮಾಡಿ ತಿಳಿಸಿದ್ದಾರೆ.