Ad Widget .

ಸುಳ್ಯ: ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಜಡಿಮಳೆಯ ನಡುವೆ ಧರಣಿ| ಗ್ರಾಮಸ್ಥರ ಪ್ರತಿಭಟನೆಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಸಾಥ್

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ‌ಮರ್ಕಂಜದಲ್ಲಿನ ಅಳವುಪಾರೆ ಗಣಿಗಾರಿಕೆ ಪ್ರದೇಶಕ್ಕೆ ಗಣಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಗ್ರಾಮಸ್ಥರಿಂದ ಧರಣಿ ಆರಂಭಗೊಂಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಗಣಿಗಾರಿಕೆಯಿಂದ ಸ್ಥಳೀಯರಿಗೆ, ಧಾರ್ಮಿಕ ಕಟ್ಟಡಗಳಿಗೆ, ಶಾಲೆ ಹಾಗೂ ಜನವಸತಿ ಪ್ರದೇಶಕ್ಕೆ ಹಾನಿಯಾಗುತ್ತಿದ್ದು ತಕ್ಷಣ ಗಣಿಗಾರಿಕೆ ನಿಲ್ಲಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮರ್ಕಂಜದ ಹಳೆ ವಿದ್ಯಾರ್ಥಿ ಸಂಘ, ಭಜನಾ ಮಂದಿರದ ಪದಾಧಿಕಾರಿಗಳು, ಗ್ರಾಮಸ್ಥರು ಧರಣಿಯಲ್ಲಿ ತೊಡಗಿದ್ದಾರೆ.

Ad Widget . Ad Widget . Ad Widget .

ಮರ್ಕಂಜದ ಅಳವುಪಾರೆ ಗಣಿಗಾರಿಕೆಗೆ ಪಂಚಾಯತ್ ನ ಪರವಾನಗಿ ನವೀಕರಣವಾಗದಿದ್ದರೂ ಅಕ್ರಮವಾಗಿ ಗಣಿಗಾರಿಕೆ ‌ನಡೆಯುತ್ತಿದ್ದು, ಇದರಿಂದ ಜನವಸತಿ ಪ್ರದೇಶ ಹಾಗೂ ಸಾರ್ವಜನಿಕ ಕಟ್ಟಡಗಳಿಗೆ ಹಾನಿಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು ತಕ್ಷಣ ಇದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದು ವರದಿ ಬರುವಲ್ಲಿಯವರೆಗೆ ಗಣಿ ಬಂದ್ ಮಾಡಲು ಪ್ರತಿಭಟನಾ ಕಾರರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ‌ಮರ್ಕಂಜ ಗ್ರಾ.ಪಂ ಅಧ್ಯಕ್ಷೆ ಪವಿತ್ರ ಗುಂಡಿ, ಪಿಡಿಒ ರವಿಚಂದ್ರ ಆಗಮಿಸಿದ್ದು, ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ.

Leave a Comment

Your email address will not be published. Required fields are marked *