Ad Widget .

ಸುಳ್ಯ: ಗಣಿಗಾರಿಕೆ ಸ್ಫೋಟಕಗಳಿಂದ ಭೂಮಿ ಕಂಪನ| ಮರ್ಕಂಜ ಗ್ರಾಮಸ್ಥರ ದೂರಿಗೆ ಸುಳ್ಯ ತಹಶಿಲ್ದಾರರಿಂದ ಸ್ಪಂದನೆ

ಸಮಗ್ರ ನ್ಯೂಸ್: ಮರ್ಕಂಜ ಗ್ರಾಮದ ವ್ಯಾಪ್ತಿಯಲ್ಲಿ ಇದೀಗ ಕೆಲವು ದಿನಗಳಿಂದ ಭೂಮಿ ಕಂಪನಗೊಳ್ಳುತ್ತಿದ್ದು, ಜೂ.28ರಂದು ಮುಂಜಾನೆ ಸುಮಾರು 7-45 ಸಮಯದಲ್ಲಿ ಭಾರೀ ಶಬ್ಧದೊಂದಿಗೆ ಭೂಮಿ ಕಂಪನಗೊಂಡಿದೆ. ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ಸುಮಾರು ಸಮಯದಿಂದ ಕರಿಗಲ್ಲು ಗಣಿಗಾರಿಕೆ ಕೂಡಾ ನಡೆದುಕೊಂಡು ಬರುತ್ತಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಗ್ರಾಮದಲ್ಲಿ ಬಂಡೆಕಲ್ಲುಗಳನ್ನು ಒಡೆಯುವ ಸಲುವಾಗಿ ಅಪಾಯಕಾರಿ ಸ್ಫೋಟಕಗಳನ್ನು ಬಳಸುತ್ತಿದ್ದಾರೆ. ಈ ಸ್ಫೋಟಕವನ್ನು ಉಪಯೋಗಿಸಿ ಬಂಡೆಕಲ್ಲುಗಳನ್ನು ಒಡೆಯುವಾಗ ಕಟ್ಟಡದೊಂದಿಗೆ ಭೂಮಿಯು ಕಂಪನಗೊಳ್ಳುತ್ತಿದ್ದು, ಸುತ್ತಮುತ್ತಲಿನ ನಾಗರಿಕರು ಭಯಭೀತರಾಗಿರುತ್ತಾರೆ.

Ad Widget . Ad Widget . Ad Widget .

ಇದರಿಂದಾಗಿ ಮನೆಯಲ್ಲಿ ವಾಸವಿರಲು ಜನತೆ ಭಯಪಡುತ್ತಿದ್ದು, ಇಂದು ಸುಳ್ಯ ತಹಶಿಲ್ದಾರರಿಗೆ ಮತ್ತೆ ದೂರು ನೀಡಿದ್ದಾರೆ.

ಈ ಮೊದಲು ಇದೇ ರೀತಿಯ ಕಂಪನಗೊಂಡಿದ್ದರೂ ಗಣಿಗಾರಿಕೆ ತಡೆ ಹಿಡಿಯುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೀಗ ಜನರಲ್ಲಿರುವ ಆತಂಕ ದೂರ ಮಾಡುವ ಉದ್ದೇಶದಿಂದ ತಾವುಗಳು ಅಲ್ಲಿ ಈಗ ನಡೆಯುತ್ತಿರುವ ಗಣಿಗಾರಿಕೆಯನ್ನು ತಟಸ್ಥಗೊಳಿಸಿ, ಜನರು ಆತಂಕದಿಂದ ಹೊರಬರುವಂತೆ ಅನುವು ಮಾಡಿಕೊಟ್ಟು ಕಂಪನ ಮತ್ತು ಸ್ಫೋಟಗೊಂಡಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದ್ದು, ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮಿ ಉತ್ತಮ ಸ್ಪಂದನೆ ನೀಡಿದ್ದಾರೆ.

ಗಣಿಗಾರಿಕೆಯ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *