ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಇದೇ ಪ್ರಥಮ ಬಾರಿಗೆ ಯುಜಿಸಿ ನಿಯಮಾವಳಿಯಂತೆ ಏಕಕಾಲಕ್ಕೆ ದ್ವಿಪದವಿ ಪಡೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್ ತಿಳಿಸಿದ್ದಾರೆ.
ಮುಕ್ತ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಯಾವುದೇ ಪದವಿಯನ್ನು ಅಧ್ಯಯನ ಮಾಡುತ್ತಲೇ ಮತ್ತೊಂದು ಪದವಿ ಪಡೆಯುವಂತೆ ಯುಜಿಸಿ ಅನುಕೂಲ ಮಾಡಿ ಕೊಟ್ಟಿದೆ. ಬಿಎ, ಬಿ.ಕಾಂ, ಬಿಎಸ್ಸಿ ಪದವಿಯನ್ನು ಪ್ರತ್ಯೇಕವಾಗಿ ವ್ಯಾಸಂಗ ಮಾಡುತ್ತಿರುವವರು ಜೊತೆಯಲ್ಲೇ ಇನ್ನೊಂದು ಪದವಿಯನ್ನೂ ಅಧ್ಯಯನ ಮಾಡಬಹುದು. ಯಾವುದೇ ಸ್ನಾತಕೋತ್ತರ ಪದವಿ ಪಡೆಯುತ್ತಲೇ ಮತ್ತೊಂದು ಸ್ನಾತಕೋತ್ತರ ಪದವಿಯನ್ನೂ ಒಮ್ಮೆಲೇ ಪಡೆಯಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.