ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಗುರುವ ಸುಂದರಿ ದಂಪತಿ ಸರಕಾರದಿಂದ ಬರುವ ಯಾವುದೇ ಸವಲತ್ತು ಸಿಗೋದಿಲ್ಲ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರು ನೀಡಿದಾಗ ತಕ್ಷಣ ಮನೆ ನಿವೇಶನದ ಹಕ್ಕುಪತ್ರ ನೀಡಿದ ಘಟಣೆ ನಡೆದಿದೆ.
ಇವರು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ನನಗೆ ಹಲವು ವರ್ಷಗಳಿಂದ ಮನೆ ಇಲ್ಲದೆ ಕರೆಂಟು ಇಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬ ತೊಂದರೆಯಾಗುತ್ತದೆ ಸರಕಾರದಿಂದ ಬರುವಂತ ಯಾವುದೇ ಸವಲತ್ತು ಸಿಗುತ್ತಿಲ್ಲ ನಾವೀಗ ಸಣ್ಣದೊಂದು ಜೋಪಡಿಯಲ್ಲಿ ವಾಸವಾಗಿದ್ದೇವೆ. ನಿಮ್ಮ ಸಂಘಟನೆಯಿಂದ ಹೋರಾಟದ ಮುಖಾಂತರ ನನಗೆ ಒಂದು ಮನೆ ಮಾಡಿಸಿಕೊಡಿ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರನ್ನು ನೀಡಿದರು.
ದೂರು ನೀಡಿದ ತಕ್ಷಣ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಮತ್ತು ಜಿಲ್ಲಾ ಸಂಚಾಲಕರಾದ ಪರಮೇಶ್ವರ ಕೆಮ್ಮಿಂಜೆ ಇವರು ಗುರುವ ಸುಂದರಿ ಎಂಬವರ ಮನೆಗೆ ಭೇಟಿ ನೀಡಿ ಆದಷ್ಟು ಬೇಗ ಮನೆ ನಿವೇಶನದ ಬಗ್ಗೆ ಅಧಿಕಾರಿ ಅವರೊಂದಿಗೆ ಮಾತನಾಡುತ್ತೇವೆ ಎಂದು ಗುರುವಾ ಸುಂದರಿ ಅವರಿಗೆ ಭರವಸೆ ನೀಡಿದರು.
ಅದೇ ರೀತಿ ಸಂಬಂಧಪಟ್ಟ ಅಧಿಕಾರಿಯವರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಮನವಿ ಪತ್ರ ಕೊಟ್ಟು ಮನವಿ ಮಾಡಲಾಯಿತು ಅದಕ್ಕೆ ಸ್ಪಂದಿಸಿದ ಅಧಿಕಾರಿಗಳು ತಕ್ಷಣ ಮನೆ ನಿವೇಶನದ ಹಕ್ಕುಪತ್ರ ನೀಡಿದರು ಇದೀಗ ಗುರುವ ಸುಂದರಿ ಎಂಬವರು ಮನೆ ಅಡಿಪಾಯ ಫೌಂಡೇಶನ್ ಕೆಲಸ ಮಾಡಿದ್ದಾರೆ.
ಈಗ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಗೆ ಮತ್ತು ಜಿಲ್ಲಾ ಸಂಚಾಲಕರಾದ ಪರಮೇಶ್ವರ ಕೆಮ್ಮಿಂಜೆ ಇವರು ಗುರುವ ಸುಂದರಿ ಎಂಬವರು ಮನದಾಳದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.