ಸಮಗ್ರ ನ್ಯೂಸ್: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಇದರ ವತಿಯಿಂದ 2022 ರ ಸಾಲಿನಲ್ಲಿ ಅರೆಭಾಷೆ ಲಲಿತ ಪ್ರಬಂಧ, ಕತೆ ಮತ್ತು ಕವಿತೆ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ಕತೆ ಮತ್ತು ಲಲಿತ ಪ್ರಬಂಧ ಸ್ವಂತ ರಚನೆಯೊಂದಿಗೆ ಒಂದು ಸಾವಿರ ಪದಗಳು ಮೀರಬಾರದು ಹಾಗೂ ಕವಿತೆ 30 ಸಾಲುಗಳ ಮಿತಿಯಿರಬೇಕು. ಬರೆದ ಬರವಣಿಗೆ ಬೇರೆ ಎಲ್ಲೂ ಪ್ರಕಟಿತ ಮತ್ತು ಅನುವಾದಿತ ಬರಹಗಳಾಗಿರಬಾರದು. ಆಯ್ಕೆಯಾದ ಮೂರು ಸ್ಪರ್ಧಾಳುಗಳಿಗೆ ಬಹುಮಾನವಾಗಿ
ಪ್ರಥಮ ರೂ 3,000ದ್ವಿತೀಯ ರೂ 2,000ತೃತೀಯ ರೂ 1,000 ನೀಡಲಾಗುವುದು. ಅಲ್ಲದ ಒಬ್ಬರೇ ಮೂರು ಸ್ಪರ್ಧೇಗಳಲ್ಲಿ ಭಾಗವಹಿಸಬಹುದು.
ಬರಹ ಕಳಿಸಲು ಅಂತಿಮ ಜು. 15 ದಿನವಾಗಿದ್ದು ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಸೀಟ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. ಮೊ ನಂ 6362522677 , [email protected] ಸಂಪರ್ಕಿಸಬಹುದು ಎಂದು ಮಡಿಕೇರಿ ಅರೆಭಾಷೆ ಅಕಾಡೆಮಿ ತಿಳಿಸಿದೆ.