ಸಮಗ್ರ ನ್ಯೂಸ್: ರಾಜ್ಯ ರಾಜಕೀಯದಲ್ಲಿ RSS ಚಡ್ಡಿ ವಿಷಯ ಜೋರಾಗಿ ಸದ್ದು ಮಾಡ್ತಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ RSS ಚಡ್ಡಿ ಬಗ್ಗೆ ಮಾತಾಡಿದ್ದಕ್ಕೆ ಬಿಜೆಪಿ ನಾಯಕರು ರೊಚ್ಚಿಗೆದ್ದಿದ್ದಾರೆ. ದಿನಾ ಒಬ್ಬೊಬ್ಬ ನಾಯಕರೇ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೀಗ RSS ಕಾರ್ಯಕರ್ತರು ಸಹ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೆ ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅವರಿಗೆ ಮಂಡ್ಯದ ಆರ್‌ಎಸ್‌ಎಸ್ ಕಾರ್ಯಕರ್ತರು (RSS Activist) ಚಡ್ಡಿ ಪಾರ್ಸಲ್ (Parcel) ಕಳುಹಿಸಿದ್ದಾರೆ.
K.R ಪೇಟೆ RSS ಕಾರ್ಯಕರ್ತರಿಂದ ಚಡ್ಡಿ ಪಾರ್ಸಲ್
ಜಿಲ್ಲೆಯ ಕೆ.ಆರ್. ಪೇಟೆಯ RSS ಕಾರ್ಯಕರ್ತರಿಂದ RSS ಚಡ್ಡಿ ಪಾರ್ಸಲ್ ಮಾಡಲಾಗಿದೆ.ಇತ್ತೀಚೆಗೆ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ಚಡ್ಡಿ ಸುಟ್ಟು ಹಾಕುತ್ತೇವೆಂದು ಹೇಳಿದ್ದರು. ಈ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆ RSS ನ ಖಾಕಿ ಚಡ್ಡಿಯನ್ನ ಕಾರ್ಯಕರ್ತರು ಪಾರ್ಸಲ್ ಮಾಡಿದ್ದಾರೆ. ಬಾಕ್ಸ್ನಲ್ಲಿ ಆರ್‌ಎಸ್‌ಎಸ್ ಚಡ್ಡಿ ಹಾಕಿ ಸಿದ್ದು ಮನೆಯ ವಿಳಾಸಕ್ಕೆ ಪಾರ್ಸಲ್ ಮಾಡಿದ್ದಾರೆ.
ಸಿದ್ದರಾಮಯ್ಯನೇ ಆ ಬೆಂಕಿಯಲ್ಲಿ ಸುಟ್ಟು ಹೋಗ್ತಾರೆ
ಸಿದ್ರಾಮಯ್ಯ ಅದೇ ಬೆಂಕೀಲಿ ಸುಟ್ಟು ಹೋಗ್ತಾರೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಹತ್ತಾರು ಗಲಭೆಗಳ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಬೆಂಕಿ ಹಾಕುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಗಲಭೆ ಹಿಂದೆ ಕಾಂಗ್ರೆಸ್ ಇದೆ. ಆರ್‌ಎಸ್‌ಎಸ್ ಒಂದು ಸೇವಾ ದೇಶಭಕ್ತರನ್ನ ನಿರ್ಮಾಣ ಮಾಡುವ ಸಂಸ್ಥೆ ಆರ್‌ಎಸ್‌ಎಸ್ ಆಗಿದೆ. ಇದಕ್ಕೆ ಕೈ ಹಾಕಿದ ನೆಹರು ಮತ್ತು ಇದಿರಾ ಗಾಂಧಿ ಸುಟ್ಟು ಹೋಗಿದ್ದಾರೆ. ಕಾಂಗ್ರೆಸ್ ಬೆಂಕಿಗೆ ಕೈ ಹಾಕಿ ಸುಟ್ಟು ಹೋಗುತ್ತದೆ. ಚಡ್ಡಿಗೆ ಬೆಂಕಿ ಹಾಕಲು ಹೇಳಿರೋ ಸಿದ್ಧರಾಮಯ್ಯ ಅವರೇ ಸುಟ್ಟು ಹೋಗುತ್ತಾರೆ.
ರಾಜ್ಯದಲ್ಲಿ ಅತಂತ್ರ ಸ್ಥಿತಿಯನ್ನು ಉಂಟು ಮಾಡಲು ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದೆ. ಮುಂದಿನ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ನಾಯಕರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಆದ ಗಲಾಟೆಗಳಿಗೆ ಅವರ ವೈಫಲ್ಯವೇ ಕಾರಣ. ರಾಜ್ಯದಲ್ಲಿ ನಡೆಯುವ ಒಳ್ಳೆಯ ಕಾರ್ಯಗಳಿಗೆ ಸಿದ್ಧರಾಮಯ್ಯ ಬೆಂಬಲ ಮಾಡಲ್ಲ. ಅವರು ಎಲ್ಲಾ ವಿಚಾರದಲ್ಲಿಯೂ ಮಾತನಾಡಬೇಕು ಅಂತ ಮಾತನಾಡುತ್ತಾರೆ ಎಂದು ನಳಿನ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
“ಪ್ರತಿಭಟನೆ ನಮ್ಮ ಹಕ್ಕು. ನಮ್ಮ ಹುಡುಗರ ಬೆನ್ನಿಗೆ ನಾವಿದ್ದೇವೆ. ಹೋರಾಟದ ಹಕ್ಕನ್ನು ಹತ್ತಿಕ್ಕುವ ಬಿಜೆಪಿ ಸರಕಾರದ ಧೋರಣೆಯನ್ನು ಸಹಿಸಲು ಸಿದ್ಧರಿಲ್ಲ,” ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುಡುಗಿದರು.
ಚಡ್ಡಿ ಸುಟ್ಟಿದ್ದಕ್ಕೆ ವಿದ್ಯಾರ್ಥಿ ಕಾಂಗ್ರೆಸ್ ಮುಖಂಡರ ಬಂಧನ
”ನಾಡಗೀತೆಗೆ ಅಪಮಾನ ಮಾಡಿದವರು, ರಾಷ್ಟ್ರಧ್ವಜಕ್ಕೆ ಅಗೌರವ ತೋರಿದವರು, ಸಾಮಾಜಿಕ ಸಾಮರಸ್ಯ ಹಾಳು ಮಾಡುತ್ತಿರುವ ಬಿಜೆಪಿಯ ಸಚಿವರು, ಶಾಸಕರು ಹಾಗೂ ಸಂಘ ಪರಿವಾರದ ಸಂಘಟನೆಗಳ ಮುಖಂಡರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದ ಸರಕಾರ, ಶಿಕ್ಷಣ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಒಂದು ಚಡ್ಡಿ ಸುಟ್ಟಿದ್ದಕ್ಕೆ ವಿದ್ಯಾರ್ಥಿ ಕಾಂಗ್ರೆಸ್ ಮುಖಂಡರನ್ನು ಬಂಧಿಸಿ ಜಾಮೀನು ರಹಿತ ಬಂಧನದ ಕ್ರಮವನ್ನು ಸಹಿಸುವುದಿಲ್ಲ,” ಎಂದು ಹೇಳಿದರು.