ಸಮಗ್ರ ನ್ಯೂಸ್: ಕಳೆದ ಮೇ ತಿಂಗಳ 21ಮತ್ತು 22 ದಿನಾಂಕಗಳಂದು ನಡೆದ ರಾಜ್ಯ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಮಾದರಿ ಉತ್ತರಗಳು ಇಲಾಖಾ ಜಾಲತಾಣದಲ್ಲಿ ಪ್ರಕಟಗೊಂಡಿವೆ.
ಈ ಕುರಿತಂತೆ ಯಾವುದೇ ಆಕ್ಷೇಪಣೆಗಳಿದ್ದರೆ ಅದನ್ನು ಸಲ್ಲಿಸಲು ದಿನಾಂಕ 03-06-2022 ರಿಂದ 10-06-2022ರ ವರೆಗೆ ಇಲಾಖೆ ಕಾಲಾವಕಾಶ ಕಲ್ಪಿಸಿದೆ. ಅಭ್ಯರ್ಥಿಗಳು ಜಾಲತಾಣದಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನನ ದಿನಾಂಕ ನಮೂದಿಸಿ ಲಾಗಿನ್ ಆಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಇದಕ್ಕಾಗಿ ಸಂಸ್ಕರಣಾ ಶುಲ್ಕ ರೂ. 50/- ಪಾವತಿಸಬೇಕಿದೆ.