ಸಮಗ್ರ ನ್ಯೂಸ್: ಎರಡು ವರ್ಷದಿಂದ ಬಗೆಹರಿಯದೇ ಉಳಿದಿದ್ದ ಸಮಸ್ಯೆಯನ್ನು ಪ್ರಧಾನಮಂತ್ರಿ ಮೋದಿ ಎರಡೇ ದಿನಕ್ಕೆ ಬಗೆಹರಿಸಿದ್ದಾರೆ. ಮಂಡ್ಯದ ತಂಡಸನಹಳ್ಳಿಯ ಯುವಕ ಚರ್ಮ ರೋಗದಿಂದ ಬಳಲುತ್ತಿದ್ದು, ಆಧಾರ್ ಕಾರ್ಡ್ ನಲ್ಲಿ ಥಂಬ್ ಇಂಪ್ರೆಷನ್ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ, ಆಧಾರ್ ಕಾರ್ಡ್ ಬ್ಲಾಕ್ ಆಗಿತ್ತು.
ಮಂಡ್ಯದ ತಂಡಸನಹಳ್ಳಿಯ ಯುವಕ ನೂತನ್‌ಗೆ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದರು. ನೂತನ್ ಗೆ ಈ ಹಿಂದೆ ಯೇ ಆಧಾರ್ ಕಾರ್ಡ್ ಮಾಡಿಸಲಾಗಿತ್ತು. ಆದರೆ ಚರ್ಮ ರೋಗವಿದ್ದ ಕಾರಣ ಆಧಾರ್ ಕಾರ್ಡ್ ಮಾಡಿಸುವ ವೇಳೆ ಥಂಬ್ ಇಂಪ್ರೆಷನ್ ತೆಗೆದುಕೊಳ್ಳುವುದು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆ ನೂತನ್ ಅವರ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಲಾಗಿತ್ತು.
ಇದಾದ ಬಳಿಕ ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ನೂತನ್ ವಂಚಿತರಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾಗ, ಥಂಬ್ ಇಂಪ್ರೆಷನ್ ನೀಡಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಆದರೆ, ಆಧಾರ್ ಕಾರ್ಡ್ ಅಪ್ಡೇಟ್ ಆಗದ ಆಗದ ಕಾರಣ ಯಾವ ಸೌಲಭ್ಯಗಳು ಕೂಡಾ ನೂತನ್ ಗೆ ಸಿಗುತ್ತಿಲ್ಲ.
ಕಳೆದ ಎರಡು ವರ್ಷಗಳಿಂದ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ಇದನ್ನು ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದಾದ ಬಳಿಕ ತನ್ನ ಸಮಸ್ಯೆಯ ಬಗ್ಗೆ ನೂತನ್ ರೈತ ಮುಖಂಡ ಮಧುಚಂದನ್ ಬಳಿ ಹೇಳಿಕೊಂಡಿದ್ದಾರೆ. ಇದಾದ ನಂತರ ಮಧುಚಂದನ್ ಅವರು ಈ ಬಗ್ಗೆ ಮೋದಿಗೆ ಪತ್ರ ಬರೆದಿದ್ದಾರೆ ಮಾತ್ರವಲ್ಲ, ನೂತನ್ ಫೋಟೋ ಹಾಕಿ ಟ್ವೀಟ್ ಕೂಡಾ ಮಾಡಿದ್ದಾರೆ. ಈ ಒಂದೇ ಟ್ವೀಟ್ ಗೆ ಪ್ರಧಾನ ಮಂತ್ರಿ ಸ್ಪಂದಿಸಿದ್ದಾರೆ. ಇದಾದ ನಂತರ ಅಧಿಕಾರಿಗಳು ಕೂಡಲೇ ನೂತನ್‌ಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಆಧಾರ್ ಕಾರ್ಡ್ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರೈತ ಮುಖಂಡ ಮಧು ಚಂದನ್‌ಗೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ನೂತನ್ ಮತ್ತು ಅವರ ಕುಟುಂಬ ಧನ್ಯವಾದ ಹೇಳಿದ್ದಾರೆ.