Ad Widget .

ಸುಳ್ಯ ನ.ಪಂಗೆ ಕಸ ವಿಲೇ’ವರಿ’| ಸುಳ್ಯದ ಕಸ ಸಾಗಾಟ ಮತ್ತೆ ಸುಳ್ಳಾಯ್ತೇ!?

ಸಮಗ್ರ ನ್ಯೂಸ್: ಸುಳ್ಯ ನಗರ ಪಂಚಾಯತ್‌ನ ಕಸದ ಸಮಸ್ಯೆ ರಾಜ್ಯದಾದ್ಯಂತ ಬಹುದೊಡ್ಡ ಸುದ್ದಿಯಾಗಿದ್ದು ಅದರ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಈ ವಿಚಾರ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪರಸ್ಪರ ವಾಗ್ವಾದ, ಕೆಸರೆರೆಚಾಟಕ್ಕೆ ಎಡೆಮಾಡಿ, ಸಾರ್ವಜನಿಕರು ನಗರ ಪಂಚಾಯತ್ ನ್ನು ನರಕ ಪಂಚಾಯತ್ ಎಂದು ಹೇಳುವ ಸ್ಥಿತಿಗೆ ಬಂದು ತಲುಪಿತ್ತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ನಡುವೆ ಚಿತ್ರನಟ ಅನಿರುದ್ಧ್‌ರವರು ಸುಳ್ಯದ ಕಸದ ಸಮಸ್ಯೆಯ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಆಡಳಿತ ಪಕ್ಷದ ಕೆಲವು ಪ್ರತಿನಿಧಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದತ್ತು. ಸದ್ಯ ನಗರ ಪಂಚಾಯತ್ ಕಸ ವಿಲೇವಾರಿಗೆ ಆರಂಭಿಸಿದ್ದು, ಆದರೆ ಇದೀಗ ಈ ಸಾಗಾಟ ನಿರಂತರವಾಗಿರುತ್ತದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.

Ad Widget . Ad Widget . Ad Widget .

ಗ್ರೀನ್ ಸ್ಪೇಸ್ ಸೊಲ್ಯೂಷನ್‌ ಎಂಬ ಕಂಪೆನಿ ಸುಳ್ಯ ನ.ಪಂ ನ ಕಸ ಸಾಗಾಟಕ್ಕೆ ಟೆಂಡರ್ ಪ್ರಕ್ರಿಯೆ ಪಡೆದಿದ್ದು, ಮೇ.28ರಂದು ನಗರ ಪಂಚಾಯತ್‌ನಿಂದ ಒಂದ ಲಾರಿಯಲ್ಲಿ ಕಸವನ್ನು ಬೆಳಗಾವಿಯತ್ತ ಸಾಗಿಸಿದ್ದಾರೆ. ಆದರೆ ಈ ಲಾರಿ ವಾರ ಕಳೆದರೂ ಬಾರದೇ ಇರುವುದು ಗೊಂದಲಕ್ಕೀಡು ಮಾಡಿದೆ. ಸರಿಸುಮಾರು ೪೦೦ ಟನ್‌ಗಳಷ್ಟು ಕಸವನ್ನು ಒಂದು ತಿಂಗಳಿನಲ್ಲಿ ಖಾಲಿ ಮಾಡುವುದಾಗಿ ಮಾತುಕತೆ ನಡೆದಿದ್ದರೂ ವಾರಕ್ಕೆ ಒಂದು ಲೋಡ್‌ನಷ್ಟು ಸಾಗಿಸಿದರೆ, ಈ ಕಸ ಮುಗಿಯುವುದಾದರೂ ಯಾವಾಗ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಟೆಂಡರ್‌ನಲ್ಲಿ ಕಸ ಸಾಗಾಟ ಮಾಡಲು ಮೂರು ಲಾರಿಗಳನ್ನು ಬಳಸುವುದಾಗಿ ಮಾಹಿತಿ ಬಂದಿದ್ದು, ಆದರೆ ಇದೀಗ ಒಂದೇ ಲಾರಿಯಲ್ಲಿ ಕಸ ಸಾಗಾಟ ಮಾಡಲಾಗಿದೆ. ಸುಳ್ಯದಲ್ಲಿ ಕಸ ಸಾಗಾಟ ಮಾಡಿದಷ್ಟು ನಗರದಲ್ಲಿರುವ ಕಸ ನಗರ ಪಂಚಾಯತ್‌ನಲ್ಲಿ ಬಂದು ಬೀಳುವುದರಿಂದ ವಾರ ಕಳೆದಂತೆ ಮತ್ತೇ ಅಷ್ಟೇ ರಾಶಿ ಕಸ ತುಂಬುತ್ತದೆ. ಹೀಗಿರುವಾಗ ಒಂದು ಲಾರಿ ವಾರದಲ್ಲಿ ಒಂದು ಲೋಡ್ ಕಸವನ್ನು ಸಾಗಿಸಿದರೆ ಮುಗಿದೀತೇ? ಎಂಬ ಪ್ರಶ್ನೆ ನಗರವಾಸಿಗಳದ್ದು.

Leave a Comment

Your email address will not be published. Required fields are marked *