ಸಮಗ್ರ ನ್ಯೂಸ್: ದ.ಕ ಜಿಲ್ಲೆಯ
ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಬುಧವಾರ ಹಿಜಾಬ್ ಧರಿಸಿ ಬಂದ 6 ಮಂದಿ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಅಮಾನತು ಮಾಡಿದ್ದು, ಈ ವಿಚಾರವಾಗಿ ಒಂದು ಕೋಮಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಘಟನೆಯ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಯೋರ್ವರ ಮೇಲೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಲ್ಲೆಗೆ ಯತ್ನಿಸಲಾಗಿದೆ ಎನ್ನಲಾಗಿದ್ದು, ಈ ವಿಚಾರವಾಗಿ ವಿಧ್ಯಾರ್ಥಿಗಳು ಸ್ಪಷ್ಟನೆ ನೀಡಿದ್ದಾರೆ.
ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಹಿಜಾಬ್ ತೊಟ್ಟ ವಿದ್ಯಾರ್ಥಿಗಳನ್ನು ಮಾತ್ರ ಅಮಾನತು ಮಾಡಲಾಗಿದೆ.
ಕ್ಯಾಂಪಸ್ ಒಳಗಡೆ ನುಗ್ಗಿ ಏಕಾಏಕಿ ವಿದ್ಯಾರ್ಥಿನಿಯರ ವೀಡಿಯೋ ತೆಗೆದ ಪತ್ರಕರ್ತನನ್ನು ಪ್ರಶ್ನಿಸಿದ್ದು,
ಪ್ರಿನ್ಸಿಪಾಲರ ಉಪಸ್ಥಿತಿಯಲ್ಲಿ ಪತ್ರಕರ್ತ ವೀಡಿಯೋವನ್ನು ಡಿಲೀಟ್ ಮಾಡಿದ್ದಾರೆ.
ನಾನು ರಿಪೋರ್ಟ್ ಮಾಡಲಷ್ಟೇ ಅನುಮತಿ ನೀಡಿದ್ದೇನೆ ವೀಡಿಯೋ ಮಾಡಲು ಅವಕಾಶ ನೀಡಿಲ್ಲ ಎಂದು ವಿದ್ಯಾರ್ಥಿಗಳಲ್ಲಿ ಪ್ರಿನ್ಸಿಪಾಲ್ ತಿಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಪತ್ರಕರ್ತನ ಮೇಲೆ ಒಮ್ಮೆಯೂ ಹಲ್ಲೆಗೆ ಪ್ರಯತ್ನಿಸಿಲ್ಲ ಇದೆಲ್ಲವೂ ಸುಳ್ಳು ವಿಚಾರಗಳು.
ಕ್ಯಾಂಪಸ್ ನ ಒಳಗಡೆ ವೀಡಿಯೋ ಚಿತ್ರಿಕರಿಸುವಂತಿಲ್ಲ ಏಕಾಏಕಿ ಬಂದು ವೀಡಿಯೋ ಮಾಡಿದಕ್ಕೆ ಪ್ರಶ್ನಿಸಿದ್ದೇವೆ ಮತ್ತೆ ಯಾವುದೇ ಗಲಭೆ ಸೃಷ್ಟಿಸಿಲ್ಲ ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.
ಕಾಲೇಜಿನ ಪ್ರಾಂಶುಪಾಲರು ಮತ್ತು ಇತರೆ ಉಪನ್ಯಾಸಕರ ಮುಂದೆಯೇ ವಿಡಿಯೋ ಡಿಲೀಟ್ ಮಾಡಿಸಿದ್ದು, ಯಾವುದೋ ಕೊಠಡಿಯಲ್ಲಿ ಕೂಡಿ ಹಾಕಿಲ್ಲ. ಬದಲಾಗಿ ಕಾಲೇಜಿನ ಕಚೇರಿಯಲ್ಲೇ ಕರೆದುಕೊಂಡು ಕುರ್ಚಿಯಲ್ಲಿ ಕೂರಿಸಿ ವೀಡಿಯೋ ಡಿಲಿಟ್ ಮಾಡಿಸಲಾಗಿದೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.