ಸಮಗ್ರ ನ್ಯೂಸ್: ಪುಷ್ಪ ಸಿನಿಮಾವನ್ನೇ ನಾಚಿಸುವ ರೀತಿಯಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಸ್ಮಗ್ಲಿಂಗ್ ಬೆಳಕಿಗೆ ಬಂದಿದೆ. ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ ತರಕಾರಿ ಬಾಕ್ಸ್ ಹಾಕಿ ಅದರ ಕೆಳಗೆ ರಕ್ತ ಚಂದನದ ತುಂಡುಗಳನ್ನಿಟ್ಟು ಟಾಟಾ ಏಸ್ ವಾಹನದಲ್ಲಿ ಕಳ್ಳಸಾಗಣೆ ಮಾಡಿದ್ದಾರೆ.
ಆಂಧ್ರ ಭಾಗದಿಂದ ಕಟ್ಟಿಗೇನಹಳ್ಳಿವರೆಗೆ ಪೊಲೀಸರು ಚೇಸಿಂಗ್ ಮಾಡುವಾಗ ಚಾಲಕ ಅಡ್ಡದಿಡ್ಡಿ ಓಡಿಸಿ ಎಮ್ಮೆಗೆ ಗುದ್ದಿ ಪರಿಣಾಮ ಪುಷ್ಪ ಸಿನಿಮಾ ಸ್ಟೈಲ್ ದಂಧೆ ಬಹಿರಂಗಗೊಂಡಿದೆ.
ಈ ವೇಳೆ 497 ಕೆ.ಜಿ ಮರದ ತುಂಡು ಹಾಗೂ 61.7 ಕೆ.ಜಿ ಚಿಕ್ಕ ಚಕ್ಕೆ ಸೇರಿದಂತೆ ಒಟ್ಟು 28 ಲಕ್ಷ ಮೌಲ್ಯದ ರಕ್ತಚಂದನ ಪೊಲೀಸರು ವಶಕ್ಕೆ ಪಡೆದಿದ್ದಾರೆ.