ಸಮಗ್ರ ನ್ಯೂಸ್: ನಟ ಅನಿರುದ್ಧ್ ಅವರೀಗ ಬೆಂಗಳೂರಿನ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಸುದ್ದಿಯಾಗಿದ್ದಾರೆ. ಆಗಾಗ ಸಾಮಾಜಿಕ ಕಳಕಳಿಯ ವಿಚಾರಗಳಲ್ಲಿ ಸುದ್ದಿಯಾಗಿರುವ ನಟ, ಇದೀಗ ‘ಬ್ರ್ಯಾಂಡ್ ಬೆಂಗಳೂರು’ ಉಳಿಸುವ ಬಗ್ಗೆ ಪತ್ರದಲ್ಲಿ ನಮೂದಿಸಿದ್ದಾರೆ.
ಐಟಿ ಹಬ್, ಗ್ರೀನ್ ಸಿಟಿ ಎಂದೆಲ್ಲಾ ವಿಶ್ವದ ಗಮನ ಸೆಳೆದ ಬೆಂಗಳೂರು ಇತ್ತೀಚೆಗೆ ಅವ್ಯವಸ್ಥೆಗಳ ಕೂಪವಾಗುತ್ತಿದೆ. ಬೆಂಗಳೂರಿನ ಸಮಸ್ಯೆಯನ್ನು ಆಲಿಸಲು ಪ್ರತ್ಯೇಕವಾಗಿರುವ ಇಲಾಖೆಯನ್ನು ರಚಿಸಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಈ ಬಗ್ಗೆ ಸೂಕ್ತ ಕಾರ್ಯ ನಿರ್ವಹಿಸಲು ಕೂಡಲೇ ಆದೇಶ ಮಾಡಬೇಕು. ಇಲ್ಲಿನ ಜನಪ್ರತಿನಿಧಿಗಳು ಇಚ್ಛಾ ಶಕ್ತಿ ಪ್ರದರ್ಶಿಸಿದರೆ ಸ್ವಚ್ಛ ನಗರಿ ಬೆಂಗಳೂರು ಆಗಬಹುದು. ಬೆಂಗಳೂರಿನಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕ್ರಮ ಕೈಗೊಳ್ಳಲು ಸ್ಥಳಿಯ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಆದಷ್ಟು ಬೇಗ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಬರೆದಿದ್ದಾರೆ ಎಂದು ಪತ್ರದಲ್ಲಿ ಅನಿರುದ್ಧ ತಿಳಿಸಿದ್ದಾರೆ.
ಘನ ತ್ಯಾಜ್ಯ ನಿರ್ವಹಣೆ ವಿಫಲ, ಹೂಳು ತುಂಬಿದ ಕೆರೆಗಳು, ಮರಗಳಲ್ಲಿ ವಿದ್ಯುತ್ ತಂತಿಗಳು, ಎಲ್ಲೆಂದರಲ್ಲಿ ಪೇಪರ್ ಅಂಟಿಸುವುದು, ಹಾಳಾದ ಫುಟ್ ಪಾತ್. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಪತ್ರದಲ್ಲಿ ಬರೆದಿದ್ದಾರೆ.