ಸಮಗ್ರ ನ್ಯೂಸ್: ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನದ ಮಾದರಿ ಪತ್ತೆ ವಿಚಾರವಾಗಿ ಹಿಂದು ಸಂಘಟನೆಗಳು ಅಷ್ಟಮಂಗಲ ಪ್ರಶ್ನೆ ಮೊರೆ ಹೋಗಿದ್ದಾರೆ.
ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿನ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ದೇವಸ್ಥಾನದ ಮಾದರಿ ಪತ್ತೆಯಾಗಿತ್ತು.
ಈ ಸಂಬಂಧ ಕೋರ್ಟ್ ನಿಂದ ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು. ಸದ್ಯ ಅಲ್ಲಿ ಪತ್ತೆಯಾಗಿರೊದು ದರ್ಗಾನಾ, ದೇವಸ್ಥಾನನಾ, ಬಸದಿನಾ ಅನ್ನೊ ಗೊಂದಲ ಸೃಷ್ಟಿಯಾಗಿದೆ. ಈ ವಿಚಾರವಾಗಿ ಹಿಂದು ಸಂಘಟನೆಗಳು ಅಷ್ಟಮಂಗಲ ಪ್ರಶ್ನೆ ಮೊರೆ ಹೋಗಿದ್ದಾರೆ. ಅಷ್ಟಮಂಗಲ ಪ್ರಶ್ನೆ ಮೊರೆ ಹೋಗಲು ವಿ.ಎಚ್.ಪಿ ಮತ್ತು ಭಜರಂಗದಳ ಚಿಂತನೆ ನಡೆಸಿವೆ. ಜಾಗದ ಧಾರ್ಮಿಕ ಮಹತ್ವ ತಿಳಿಯಲು ನಿರ್ಧರಿಸಿದ ಹಿಂದೂ ಸಂಘಟನೆಗಳು, ಕೇರಳದಿಂದ ಪೊದುವಾಳ್ ರನ್ನು ಕರೆಸಿ ಪ್ರಶ್ನಾ ಚಿಂತನೆಯನ್ನು ಮಾಡಲು ನಿರ್ಧಾರ ಮಾಡಿವೆ.
ಅಷ್ಟಮಂಗಳ ಪ್ರಶ್ನಾ ಚಿಂತನೆಗೆ ಇನ್ನಷ್ಟೆ ದಿನಾಂಕ ನಿಗದಿಯಾಗಬೇಕಿದೆ. ದರ್ಗಾ ಇರುವ ಜಾಗದಲ್ಲಿ ದೇವಸ್ಥಾನ ಇತ್ತೆಂದು ವಿ.ಎಚ್.ಪಿ ವಾದಮಾಡುತ್ತಿದೆ. ಪ್ರಶ್ನಾಚಿಂತನೆಯಲ್ಲಿ ಐತಿಹಾಸಿಕ, ಧಾರ್ಮಿಕ ಹಿನ್ನೆಲೆ ಗೋಚರವಾಗುವ ಸಾಧ್ಯತೆ ಇದೆ.