ಸಮಗ್ರ ನ್ಯೂಸ್: ಪೊನ್ನಂಪೇಟೆಯ ಖಾಸಗಿ ಶಾಲೆಯೊಂದರಲ್ಲಿ ಇತ್ತೀಚೆಗೆ ಸಂಘ ಪರಿವಾರ, ಭಜರಂಗದಳದಿಂದ ಏರ್ಪಡಿಸಲಾಗಿದ್ದ ಶೌರ್ಯ ಶಿಬಿರ ಕಾರ್ಯಕ್ರಮ ತೀವ್ರ ವಿವಾದಕ್ಕೀಡಾಗಿದ್ದು, ಶಿಬಿರದಲ್ಲಿ ಕಾರ್ಯಕರ್ತರಿಗೆ ಬಂದೂಕು ತರಬೇತಿ, ತ್ರಿಶೂಲ ದೀಕ್ಷೆ ನೀಡಲಾಗಿದೆ.
ಶ್ರೀಸಾಯಿ ಶಂಕರ ವಿದ್ಯಾ ಮಂದಿರದಲ್ಲಿ ಶೌರ್ಯ ಪ್ರಶಿಕ್ಷಣವರ್ಗ ಶಿಬಿರ ಎಂಬ ತರಬೇತಿ ಕಾರ್ಯಕ್ರಮ ನಡೆಸಲಾಗಿದ್ದು, ಈ ವೇಳೆ 50ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಶಾಲೆಯಲ್ಲಿ ತ್ರಿಶೂಲ ದೀಕ್ಷೆ, ಏರ್ ರೈಫಲ್ ಮೂಲಕ ಬಂದೂಕು ತರಬೇತಿ ನೀಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಫೋಟೋಗಳು ವೈರಲ್ ಆಗಿದ್ದು, ಇಂತಹ ಶಿಬಿರಗಳಿಗೆ ಕೊಡಗು ಜಿಲ್ಲಾಡಳಿತ ಅವಕಾಶ ನೀಡಿದ್ದಾದರೂ ಹೇಗೆ ಎಂದು ಎಸ್ ಡಿ ಪಿ ಐ ಸಂಘಟನೆ ಪ್ರಶ್ನಿಸಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷಗಳ ನಡುವೆ ಭಜರಂಗದಳ, ಸಂಘ ಪರಿವಾರದಿಂದ ಇಂತಹ ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸುವ ಮೂಲಕ ಸಮಾಜದಲ್ಲಿನ ಶಾಂತಿ ವಾತಾವರಣ ಕದಡುವ ಪ್ರಚೋದನೆ ನೀಡಲಾಗುತ್ತಿದೆ. ಯುವಕರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ಕಿಡಿಕಾರಿದೆ.