Ad Widget .

ಕರೆಂಟು ಹೋದ ಟೈಮಲಿ ಇದೆಂಥ ಎಡವಟ್ಟು, ಅವನ ಹುಡುಗಿಗೆ ಇವನು, ಇವನ ಹುಡುಗಿಗೆ ಅವನು ತಾಳಿ ಕಟ್ಟಿದ!, ಅತ್ತೆ ಮನೆಗೆ ಹೋದಾಗ ಘಟನೆ ಬೆಳಕಿಗೆ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget .

ಮಧ್ಯ ಪ್ರದೇಶ: ಮದುವೆ ದಿನ ವಧು ವರರೇ ಅದಲು ಬದಲಾದರೆ ಅವರ ಪರಿಸ್ಥಿತಿ ಹೇಗಿರಬೇಡ ಯೋಚಿಸಿ.ಮಧ್ಯಪ್ರದೇಶದ ಗ್ರಾಮಾಂತರ ಪ್ರದೇಶದಲ್ಲಿ ಹಿಂದೆಂದೂ ಕೇಳಿರದ ಘಟನೆಯೊಂದು ಬೆಳಕಿಗೆ ಬಂದಿದೆ.

ಉಜ್ಜಯಿನಿಯ ಗ್ರಾಮವೊಂದರಲ್ಲಿ ವಿಚಿತ್ರ ಘಟನೆ:
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದ್ದು, ರಮೇಶ್‌ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಬೇರೆ ಬೇರೆ ಕುಟುಂಬದ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರನ್ನು ವಿವಾಹವಾಗಬೇಕಿತ್ತು. ಸಂಪ್ರದಾಯದ ಪ್ರಕಾರ ವಧುಗಳು ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡಿದ್ದರಿಂದ ಹಾಗೂ ಮದುವೆಯ ವೇಳೆ ಕರೆಂಟ್ ಕೈ ಕೊಟ್ಟಿದ್ದರಿಂದ ವಧುಗಳು ಅದಲು ಬದಲಾಗಿದ್ದಾರೆ.

ಅಕ್ಕ ತಂಗಿ ಒಂದೇ ರೀತಿಯ ಡ್ರೆಸ್ ತೊಟ್ಟಿದ್ದರಿಂದ ಗೊಂದಲ:
ಮದುವೆ ದಿನ ಅಕ್ಕ ಹಾಗೂ ತಂಗಿ ಇಬ್ಬರೂ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರಿಂದ ಅವರ ಮನೆಯವರಿಗೂ ಈ ವಿಷಯ ಗಮನಕ್ಕೆ ಬಂದಿಲ್ಲ. ವಧುಗಳು ತಮ್ಮ ಗಂಡನ ನಿವಾಸವನ್ನು ತಲುಪಿದಾಗ ಅವರಿಬ್ಬರು ಅದಲು ಬದಲಾಗಿರೋದು ಕುಟುಂಬಗಳ ಗಮನಕ್ಕೆ ಬಂದಿದೆ.

ಬೇರೆ ಬೇರೆ ವಧು-ವರರಿಂದ ವಿಧಿವಿಧಾನ:
ಉಜ್ಜಯಿನಿ ಜಿಲ್ಲೆಯ ಅಸ್ಲಾನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಂದೇ ದಿನಾಂಕದಂದು ಮೂವರು ಸಹೋದರಿಯರ ಮದುವೆ ನಡೆದಿತ್ತು. ಆದಾಗ್ಯೂ, ದೀರ್ಘಾವಧಿಯ ವಿದ್ಯುತ್ ಕಡಿತದಿಂದಾಗಿ ಇಬ್ಬರು ಸಹೋದರಿಯರು ತಪ್ಪಾಗಿ ಬೇರೆ ವರನೊಂದಿಗೆ ಮದುವೆಯ ವಿಧಿಗಳನ್ನು ಪೂರ್ಣಗೊಳಿಸಿದರು.

ಕರೆಂಟ್ ಹೋದಾಗ ಮುಖವೇ ಕಾಣಲಿಲ್ಲ!:
ಈ ಮದುವೆಯು ಭಿಲ್ ಸಮುದಾಯದ ಕುಟುಂಬದಲ್ಲಿ ನಡೆದಿದೆ. ಲೈಟ್‌ಗಳು ಆಫ್ ಆದಾಗ ಯಾವುದೇ ಜನರೇಟರ್ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ವಿದ್ಯುತ್ ಕಡಿತಗೊಂಡಾಗ ಕತ್ತಲು ಆವರಿಸಿತು. ಬೆಳಕು ಇಲ್ಲದ್ದರಿಂದ ಮುಖ ಸರಿಯಾಗಿ ಕಾಣಿಸದೇ ಹಾಗೂ ವಧುಗಳು ಒಂದೇ ರೀತಿಯ ಉಡುಪು ತೊಟ್ಟಿದ್ದರಿಂದ ಸಂಬಂಧಿಕರು ಸರಿಯಾಗಿ ವಧುಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ.

ಮೆರವಣಿಗೆಯಲ್ಲಿ ಅತ್ತೆ ಮನೆಗೆ ಹೋದ ಸೊಸೆಯಂದಿರು:
ಮದುವೆಯ ಎಲ್ಲಾ ಆಚರಣೆಗಳು ಮುಗಿಯುವ ಹೊತ್ತಿಗೆ, ವಧುಗಳು ಬದಲಾಗಿದ್ದಾರೆ ಎಂಬ ಸುಳಿವು ಯಾರಿಗೂ ಇರಲಿಲ್ಲ. ಆದಾಗ್ಯೂ, ವಧುಗಳು ಮೆರವಣಿಗೆಯೊಂದಿಗೆ ಡಂಗ್ವಾರಾದಲ್ಲಿರುವ ತಮ್ಮ ಅತ್ತೆಯ ಸ್ಥಳಕ್ಕೆ ತಲುಪಿದಾಗ ಮಾತ್ರ ಕುಟುಂಬದವರಿಗೆ ತಪ್ಪು ಗಮನಕ್ಕೆ ಬಂದಿತು.

ವಧು-ವರರ ಮನೆಯಲ್ಲಿ ಗೊಂದಲ, ಗಲಾಟೆ:
ವಧುಗಳ ಎಕ್ಸ್‌ಚೇಂಜ್ ವಿಚಾರ ಎರಡು ಕುಟುಂಬಗಳ ನಡುವೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸೊಸೆಯಂದಿರೇ ಬದಲಾಗಿದ್ದನ್ನು ಕಂಡು ಅತ್ತೆ-ಮಾವಂದಿರು ಮತ್ತು ಅತಿಥಿಗಳು ದಿಗ್ಭ್ರಮೆಗೊಂಡರು. ಇದೇ ವಿಚಾರಕ್ಕೆ ಎರಡೂ ಕುಟುಂಬಗಳ ನಡುವೆ ದೊಡ್ಡ ಗಲಾಟೆಯೇ ನಡೆಯಿತು. ಕೂಡಲೇ ಗ್ರಾಮಸ್ಥರು, ಅತಿಥಿಗಳು ಹಾಗೂ ಹಿರಿಯರು ಒಂದಾಗಿ, ಮಾತುಕತೆ ನಡೆಸಿ, ವಿವಾದ ಬಗೆಹರಿಸಲಾಯ್ತು.

ಮತ್ತೆ ಅದೇ ಸಂಗಾತಿಯೊಂದಿಗೆ ವಿವಾಹ?:
ಮದುವೆ ಸಮಾರಂಭದಲ್ಲಿ ಕತ್ತಲಾದ ಕಾರಣ ಗಣೇಶ್ ಭೋಲಾ ಅವರನ್ನು ಮದುವೆಯಾಗಬೇಕಿದ್ದ ನಿಕಿತಾ ಅವರನ್ನು ವಿವಾಹವಾದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದಾದ ನಂತರ ಪುರೋಹಿತರನ್ನು ಕರೆಸಿ ಈ ಬಾರಿ ಸರಿಯಾದ ಸಂಗಾತಿಯೊಂದಿಗೆ ಮತ್ತೆ ವಿಧಿ ವಿಧಾನಗಳನ್ನು ನಡೆಸಲಾಯಿತು ಎಂದು ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *