ಸಮಗ್ರ ನ್ಯೂಸ್: ರಸ್ತೆ ಕಳಪೆ ಕಾಮಗಾರಿಯಿಂದಾಗಿ ಕಾಂಕ್ರಿಟ್ ಕುಸಿದ ಪರಿಣಾಮ ಟಿಪ್ಪರ್ ಲಾರಿಯೊಂದು ಪಕ್ಕದ ಹೊಳೆಗೆ ಮಗುಚಿ ಬಿದ್ದ ಘಟನೆ ಉಡುಪಿಯ ಕಿದಿಯೂರು ಸಂಕೇಶದಲ್ಲಿ ನಡೆದಿದೆ.
ಮಣ್ಣು ತುಂಬಿಕೊಂಡು ಬರುತ್ತಿದ್ದ ಲಾರಿಯ ಭಾರಕ್ಕೆ ಕಾಂಕ್ರಿಟ್ ರಸ್ತೆ ಕುಸಿದಿದೆ. ಪರಿಣಾಮ ಲಾರಿ ಪಕ್ಕದ ಹೊಳೆಗೆ ಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಕಾಂಕ್ರೀಟ್ ಅಡಿಭಾಗದಲ್ಲಿ ಸರಿಯಾಗಿ ಮಣ್ಣು ತುಂಬದ ಪರಿಣಾಮ ರಸ್ತೆ ಕುಸಿದು ಹೋಗಿದೆ. ರಸ್ತೆ ಕಳಪೆ ಕಾಮಗಾರಿಯ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.