ಸಮಗ್ರ ನ್ಯೂಸ್: ಪೆಟ್ರೋಲ್, ಡೀಸೆಲ್ ದರ ಏರಿಕೆಯ ಬೆನ್ನಲ್ಲೇ ವಾಹನ ಸವಾರರಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದ್ದು, ವಾಹನಗಳ ಮಾಲಿನ್ಯ ಪರೀಕ್ಷೆಯ ದರವನ್ನು ಹೆಚ್ಚಳ ಮಾಡಿದೆ.
ಸಾರಿಗೆ ಇಲಾಖೆ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಎಲ್ಲಾ ರೀತಿಯ ಡಿಸೇಲ್ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕವನ್ನು 35 ರೂ ಹೆಚ್ಚಿಸಲಾಗಿದೆ.
ಈ ಮೂಲಕ 125 ರೂ. ಇದ್ದ ಶುಲ್ಕ ಈಗ 160 ರೂ.ಗೆ ಏರಿಕೆಯಾಗಿದೆ. ದ್ವಿಚಕ್ರ ವಾಹನಗಳ ಶುಲ್ಕವನ್ನು 50 ರೂ. ನಿಂದ 65 ರೂ.ವರೆಗೆ ಹೆಚ್ಚಿಸಲಾಗಿದೆ. ಆಟೋಗಳಿಗೆ 15 ರೂ. ಮಾಲಿನ್ಯ ಪರೀಕ್ಷಾ ಶುಲ್ಕ ಹೆಚ್ಚಿಸಲಾಗಿದೆ. ನಾಲ್ಕು ಚಕ್ರದ ವಾಹನಗಳಿಗೆ ಶುಲ್ಕವನ್ನು 90 ರೂ. ನಿಂದ 115 ರೂ.ಗೆ ದರ ನಿಗದಿಪಡಿಸಲಾಗಿದೆ.