Ad Widget .

ಮೇ.12ರಂದು ಎಸ್ಎಸ್ ಎಲ್ ಸಿ ಫಲಿತಾಂಶ!?

ಸಮಗ್ರ ನ್ಯೂಸ್: ಪ್ರಸಕ್ತ ಸಾಲಿನ ಎಸ್ ಎಸ್ ಎಲ್‍ಸಿ ಪರೀಕ್ಷಾ ಫಲಿತಾಂಶ ಮೇ 12ರಂದು ಪ್ರಕಟವಾಗುವ ಸಾಧ್ಯತೆ ಇದೆ.

Ad Widget . Ad Widget .

ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 23 ರಿಂದ ಪ್ರಾರಂಭವಾಗಿದ್ದು, ಮೇ 1-2ರೊಳಗೆ ಪೂರ್ಣ ಗೊಳ್ಳಲಿದೆ ಎಂದು ಮಂಡಳಿ ತಿಳಿಸಿತ್ತು.

Ad Widget . Ad Widget .

ನಂತರ ಫಲಿತಾಂಶವನ್ನು ಅಂತಿಮಗೊಳಿಸಲು 10-15 ದಿನ ಕಾಲ ತೆಗೆದುಕೊಳ್ಳಲಿದ್ದು, ಮೇ 12ರಂದು ಫಲಿತಾಂಶ ಪ್ರಕಟವಾಗಬಹುದು ಎಂದು ಹೇಳಲಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಚ್ 28ರಿಂದ ಏಪ್ರಿಲ್ 11 ರವರೆಗೆ ಹತ್ತನೇ ತರಗತಿಯ ಪರೀಕ್ಷೆ ನಡೆಸಿತ್ತು. ಕಳೆದೆರಡು ವರ್ಷಗಳಲ್ಲಿ ಕೋವಿಡ್‍ನಿಂದ ಸರಿಯಾದ ಕ್ರಮದಲ್ಲಿ ಪರೀಕ್ಷೆ ಮಾಡಲಾಗದೇ ಸಮಸ್ಯೆಯಾಗಿತ್ತು. ಆದರೆ ಈ ಬಾರಿ ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಪರೀಕ್ಷೆಯನ್ನು ಸಮರ್ಪಕವಾಗಿ ಮಾಡಲಾಗಿದೆ.

ಈ ಬಾರಿ ಪರೀಕ್ಷೆ ಬರೆಯಲು ಒಟ್ಟು 15,387 ಶಾಲೆಗಳಿಂದ 8,73,846 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಗಂಡು ಮಕ್ಕಳು 4,52,732 ಹಾಗೂ 4,21,110 ಹೆಣ್ಣು ಮಕ್ಕಳು, 4 ತೃತೀಯ ಲಿಂಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದರು. ಸುಮಾರು 5,307 ವಿಭಿನ್ನ ಸಾಮಥ್ರ್ಯವುಳ್ಳ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ ಬರೆದಿದ್ದರು.

ರಾಜ್ಯಾದ್ಯಂತ 3,444 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಏಪ್ರಿಲ್ 23ರಿಂದ ಮೌಲ್ಯಮಾಪನ ಮಾಡಲಾಗುತ್ತದೆ. ಸುಮಾರು 34 ಜಿಲ್ಲೆಗಳಲ್ಲಿನ 234 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆದ ಪ್ರಕ್ರಿಯೆಯಲ್ಲಿ 63,796 ಶಿಕ್ಷಕರು ಭಾಗಿಯಾಗಿದ್ದಾರೆ.

Leave a Comment

Your email address will not be published. Required fields are marked *