ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಮಂಗಳವಾರ (ಮೇ.3) ರಂದು ರಂಜಾನ್ ಆಚರಣೆ ನಡೆಸಲಾಗುವುದು ಎಂದು ಕೇಂದ್ರೀಯ ಮೂನ್ ಕಮಿಟಿ ಹೇಳಿದೆ.
ದೇಶದ ಯಾವ ಭಾಗದಲ್ಲೂ ಚಂದ್ರದರ್ಶನವಾಗಿಲ್ಲ. ದೆಹಲಿ, ಲಕ್ನೋ, ಕೊಲ್ಕತ್ತಾ ಸೇರಿದಂತೆ ಎಲ್ಲಿಯೂ ಚಂದ್ರದರ್ಶನವಾದ ವರದಿ ಬಂದಿಲ್ಲ. ಈ ಹಿನ್ನಲೆಯಲ್ಲಿ ಮಂಗಳವಾರ ರಂಜಾನ್ ಆಚರಣೆ ಮಾಡಲಾಗುವುದು ಎಂದು ಸಮಿತಿ ತಿಳಿಸಿದೆ.