Ad Widget .

ಕಾಲುವೆಗೆ ಉರುಳಿದ ಪ್ರಯಾಣಿಕರ ವಾಹನ| ಎಂಟು‌ ಮಕ್ಕಳು ಜಲಸಮಾಧಿ

ಸಮಗ್ರ ನ್ಯೂಸ್: ಪ್ರಯಾಣಿಕರನ್ನು ತ್ರಿಚಕ್ರ ವಾಹನವೊಂದು ಪಲ್ಟಿಯಾಗಿ ನೀರಾವರಿ ಕಾಲುವೆಯಲ್ಲಿ ಮುಳುಗಿದ ಪರಿಣಾಮ ಎಂಟು ಮಕ್ಕಳು ಸಾವನ್ನಪ್ಪಿದ್ದ ಘಟನೆ ಈಜಿಪ್ಟ್ ನ ಡೆಲ್ಟಾ ಪ್ರಾಂತ್ಯದ ಬೆಹೈರಾದಲ್ಲಿ ನಡೆದಿದೆ.

Ad Widget . Ad Widget .

12-15 ವರ್ಷ ವಯಸ್ಸಿನ ಮಕ್ಕಳು ಕೈರೋದ ರಾಜಧಾನಿಯಿಂದ ಉತ್ತರಕ್ಕೆ 140 ಕಿ ಮೀ ದೂರದ ನಗರದ ಕಾರ್ಖಾನೆಯೊಂದರಲ್ಲಿ ಕೆಲಸಗಾರರಾಗಿದ್ದರು. ನಿನ್ನೆ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ತ್ರಿಚಕ್ರ ವಾಹನ ಪಲ್ಟಿಯಾಗಿ ನೀರಾವರಿ ಕಾಲುವೆಗೆ ಬಿದ್ದಿತು. ಪರಿಣಾಮ 2 ಪ್ರಯಾಣಿಕರಲ್ಲಿ 8 ಮಂದಿ ಸಾವನ್ನಪ್ಪಿದ್ದು, ಉಳಿದ ನಾಲ್ವರು ಅಪಘಾತದಿಂದ ಪಾರಾಗಿದ್ದಾರೆ.

Ad Widget . Ad Widget .

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಟ್ರೈಸಿಕಲ್ ಚಾಲಕನನ್ನು ಪರವಾನಗಿ ಇಲ್ಲದ ವಾಹನವನ್ನು ಚಾಲನೆ ಮಾಡಿದ ಆರೋಪದ ಮೇಲೆ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಮಾನವ ಕಳ್ಳಸಾಗಣೆ ಮತ್ತು ಬಾಲಕಾರ್ಮಿಕರನ್ನು ಬಳಸಿಕೊಳ್ಳುವಲ್ಲಿ ಅವರು ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.

Leave a Comment

Your email address will not be published. Required fields are marked *