ಸಮಗ್ರ ನ್ಯೂಸ್: ಹಾವೇರಿ ಜಿಲ್ಲೆಯಲ್ಲಿ ಔದ್ಯೋಗಿಕ ಕ್ರಾಂತಿ ಮಾಡಲಾಗುವುದು. ಜಿಲ್ಲೆಯಲ್ಲಿ ಒಂದು ಸಾವಿರ ಎಕರೆಯ ಕೈಗಾರಿಕಾ ಟೌನ್ ಶಿಪ್‌ನ್ನು ಪ್ರಾರಂಭ ಆಗಲಿದೆ. ಹೆಚ್ಚು ಉದ್ಯೋಗ ನೀಡುವ ಸಿದ್ಧ ಉಡುಪು ತಯಾರಿಕಾ ಘಟಕಗಳನ್ನು ಹೆಚ್ಚೆಚ್ಚು ಜಿಲ್ಲೆಗೆ ತರಲಾಗುವುದು. ಶಿಗ್ಗಾಂವಿ ತಾಲೂಕನ್ನು ಭಾರತ ದೇಶದಲ್ಲೇ ಟೆಕ್ಸಟೈಲ್ಸ್ ಹಬ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಮೆಗಾ ಡೈರಿ ಅನುಮೋದನೆ ಕೊಟ್ಟಿದ್ದೇವೆ. ಹಾವೇರಿಯ ಹಾಲು ಒಕ್ಕೂಟದ ಕೆಲಸ ಈಗಾಗಲೆ ಪ್ರಾರಂಭ ಆಗಿದೆ. ಹಾಲು ಒಕ್ಕೂಟಕ್ಕಾಗಿ ನಾನು ಹೋರಾಟ ಮಾಡಿದ್ದೆ. ಅದರ ಕೆಲಸ ಈಗ ಆರಂಭವಾಗಿದೆ. ಕ್ಷೀರ ಕ್ರಾಂತಿ ಆಗಬೇಕು. ನಿಮ್ಮೆಲ್ಲರ ಸಹಕಾರ ಇರಲಿ. ಎರಡ್ಮೂರು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಇಲ್ಲಿ ಮಾಡುತ್ತೇವೆ. ಶಿಕ್ಷಣ ಮತ್ತು ಉದ್ಯೋಗ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.