ಸಮಗ್ರ ನ್ಯೂಸ್: ಇಲ್ಲಿನ ಪುಂಜಾಲಕಟ್ಟೆಯ ನೆರಳಕಟ್ಟೆಯ ಜಿತೇಶ್ ವುಡ್ ವರ್ಕ್ಸ್‌ನ ಮಾಲಕ ಹರೀಶ್ ಕುಲಾಲ್ ಎ. 28 ರಂದು ಬೆಳಿಗ್ಗೆ ತನ್ನ ಅಂಗಡಿಯಲ್ಲಿ ನೇಣು ಬಿಗಿದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನೇರಳಕಟ್ಟೆ ಕುಲಾಲು ದರ್ಖಾಸು ನಿವಾಸಿ ಹರೀಶ್(42ವ) ಎಂದು ತಿಳಿದುಬಂದಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರು ತನ್ನ ಅಂಗಡಿಯಲ್ಲಿ ಮರದ ವಿವಿಧ ರೀತಿಯ ಪೀಠೋಪಕರಣಗಳನ್ನು ತಯಾರಿಸುತ್ತಿದ್ದರು ಅವರೊಂದಿಗೆ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು.