ಬೆಳ್ಳಾರೆಯ ನೆಟ್ಟಾರು ಮನೆಯಿಂದ ಮೊಬೈಲ್ ಕದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ ಘಟನೆ ಎ.25 ರಂದು ನಡೆದಿದೆ.
ಮದ್ಯಾಹ್ನದ ಸಮಯಕ್ಕೆ ನೆಟ್ಟಾರಿನ ಮಹಮ್ಮದ್ ಕುಂಞ ಯವರ ಮನೆಯ ಎದುರು ಬಾಗಿಲನ್ನು ಸರಿಸಿ ಮನೆಯ ಒಳಗೆ ಹೋಗಿ ಸುಮಾರು 8000 ಮೌಲ್ಯದ ಎರಡು ಸ್ಯಾಮ್ ಸಾಂಗ್ ಮೊಬೈಲ್ ಎ.24 ರಂದು ಕದ್ದೊಯ್ದಿದ್ದಾರೆ ಎಂದು ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳ್ಳತನ ಮಾಡಿದ ಆರೋಪಿ ಉಮೈದ್
ರಾತ್ರಿ ಸಮಯಕ್ಕೆ ಸ್ವತ್ತು ಸಮೇತ ಸಂಪ್ಯ ಪೊಲೀಸ ರು ವಶಕ್ಕೆ ಪಡೆದಿದ್ದಾರೆ.
ಈ ವಿಚಾರ ತಿಳಿದು ಸಂಪ್ಯ ಠಾಣೆಗೆ ಹೋಗಿ ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದಿರುವ ಮೊಬೈಲ್ ಫೊನ್ ಗಳು, ಕೊಳಂಬಳ ಅಬ್ಬಾಸ್ ಮತ್ತು ತಾರಿಪಡ್ಡು ಅದ್ರು ಎಂಬವರ ಮನೆಯಿಂದ ಕಳ್ಳತನ ಮಾಡಿರುವ ಮೊಬೈಲುಗಳು ಸಿಕ್ಕಿರುವುದಾಗಿ ತಿಳಿದು ಬಂದಿದೆ. ಆರೋಪಿ ಉಮೈದ್ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.