Ad Widget .

ಮಂಗಳೂರು: ಧರ್ಮದಂಗಲ್ ನಡುವೆಯೂ ಸಾಮರಸ್ಯದ ಬೀಜ ಬಿತ್ತಿದ ಹಿಂದೂ ನವವಿವಾಹಿತ| ಮಸೀದಿಯಲ್ಲಿ ಮುಸ್ಲಿಂ ಗೆಳೆಯರಿಗಾಗಿ ಇಪ್ತಾರ್ ಆಯೋಜನೆ

Ad Widget . Ad Widget .

ಸಮಗ್ರ ನ್ಯೂಸ್: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್ ದಿನಕ್ಕೊಂದು ತಿರುವು ಪಡೆಯತ್ತಿದೆ. ಹಿಜಾಬ್‌ನಿಂದ ಆರಂಭವಾದ ವೈಮನಸ್ಸು ಹಲಾಲ್, ವ್ಯಾಪಾರ ಬಹಿಷ್ಕಾರವನ್ನು ದಾಟಿ ಬಂಗಾರ ಖರೀದಿಯವರೆಗೂ ಬಂದು ನಿಂತಿದೆ.

Ad Widget . Ad Widget .

ಈ ಘಟನೆಯ ಆತಂಕ‌ದ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯದ ಘಟನೆ ನಡೆದಿದೆ. ತನ್ನ ಮದುವೆಗೆ ಬಂದರೂ ಉಪವಾಸ ನಿಮಿತ್ತ ಊಟ ಮಾಡದೇ ಹಿಂದಿರುಗಿದ ಮುಸ್ಲಿಂ ಗೆಳೆಯರಿಗೋಸ್ಕರ ಹಿಂದೂ ಯುವಕ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿ, ನೂರಾರು ಮಂದಿಗೆ ಊಟ ಹಾಕಿದ ಮಾದರಿ ಕಾರ್ಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಬೈರಿಕಟ್ಟೆಯಲ್ಲಿ ನಡೆದಿದೆ.

ಬೈರಿಕಟ್ಟೆಯ ನಿವಾಸಿ ಚಂದ್ರಶೇಖರ್ ಏಪ್ರಿಲ್ 24ರಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದು, ತನ್ನ ಮದುವೆಯ ಕರೆಯೋಲೆಯನ್ನು ಬಂಧು ಮಿತ್ರರು ಸಹಿತ ಊರಿನ ಮುಸ್ಲಿಂ ಗೆಳೆಯರಿಗೂ ನೀಡಿದ್ದರು. ಬೈರಿಕಟ್ಟೆ ಗೆಳೆಯರ ಬಳಗ ತಂಡದಲ್ಲಿ ಮುಸ್ಲಿಂ ಯುವಕರೂ ಇದ್ದು, ಚಂದ್ರಶೇಖರ್ ಅತ್ಯುತ್ತಮ ಸ್ನೇಹ ಸಂಪಾದನೆ ಮಾಡಿದ್ದರು. ಚಂದ್ರಶೇಖರ್ ಮದುವೆಗೆ ಮುಸ್ಲಿಂ ಗೆಳೆಯರೂ ಆಗಮಿಸಿ ನೂತನ ವಧುವರರಿಗೆ ಶುಭ ಹಾರೈಸಿದ್ದರು.

ರಂಝಾನ್ ಉಪವಾಸ ಕಾರಣದಿಂದ ಮದುವೆಗೆ ಬಂದ ಮುಸ್ಲಿಂ ಗೆಳೆಯರು ಬರೀ ಹೊಟ್ಟೆಯಲ್ಲಿ ಮರಳಿ ಮನೆಗೆ ಹೋದದ್ದನ್ನು ಗಮನಿಸಿದ ಚಂದ್ರಶೇಖರ್, ಊರಿನ ಮಸೀದಿಯಲ್ಲಿ ಊರಿನ ಮುಸ್ಲಿಂ ಬಾಂಧವರಿಗೆ ತನ್ನ ಮದುವೆಯ ಪ್ರಯುಕ್ತ ಊಟ ಹಾಕಲು ತೀರ್ಮಾನಿಸಿದ್ದಾರೆ.

ಬೈರಿಕಟ್ಟೆಯ ಜುಮಾ ಮಸೀದಿಯಲ್ಲಿ ತನ್ನ ಊರಿನ ಎಲ್ಲಾ ಮುಸ್ಲಿಂ ಬಾಂಧವರಿಗಾಗಿ ಚಂದ್ರಶೇಖರ್ ಇಫ್ತಾರ್ ಕೂಟ ಆಯೋಜಿಸಿದ್ದಾರೆ. ಹಣ್ಣುಹಂಪಲು, ಜ್ಯೂಸ್ ಮತ್ತು ವಿವಿಧ ಬಗೆಯ ತಿಂಡಿಗಳನ್ನು ಇಫ್ತಾರ್ ಕೂಟದಲ್ಲಿ ಚಂದ್ರಶೇಖರ್ ನೀಡಿದ್ದಾರೆ. ಚಂದ್ರಶೇಖರ್ ಮತ್ತು ಅವರ ಹಿಂದೂ ಗೆಳೆಯರೂ ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಎಲ್ಲರೂ ಸಹ ಭೋಜನ ಮಾಡಿದ್ದಾರೆ.

ಇಫ್ತಾರ್ ಕೂಟವನ್ನು ಏರ್ಪಡಿಸಿದ ನವವಿವಾಹಿತ ಚಂದ್ರಶೇಖರ್ ಅವರನ್ನು ಜಲಾಲಿಯಾ ಜುಮಾ ಮಸೀದಿ ಮತ್ತು ಮವೂನತುಲ್ ಇಸ್ಲಾಂ ಯುವಜನ ಕಮಿಟಿಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಮಸೀದಿಯ ಧರ್ಮಗುರುಗಳು ಸನ್ಮಾನಿಸಿದ್ದಾರೆ. ಸೌಹಾರ್ದ ಇಫ್ತಾರ್ ಕೂಟಕ್ಕೆ ಆಗಮಿಸಿದ ಎಲ್ಲರೂ ಚಂದ್ರಶೇಖರ್ ನೀಡಿದ ಆತಿಥ್ಯಕ್ಕೆ ಶುಭ ಹಾರೈಸಿದ್ದಾರೆ.

1 thought on “ಮಂಗಳೂರು: ಧರ್ಮದಂಗಲ್ ನಡುವೆಯೂ ಸಾಮರಸ್ಯದ ಬೀಜ ಬಿತ್ತಿದ ಹಿಂದೂ ನವವಿವಾಹಿತ| ಮಸೀದಿಯಲ್ಲಿ ಮುಸ್ಲಿಂ ಗೆಳೆಯರಿಗಾಗಿ ಇಪ್ತಾರ್ ಆಯೋಜನೆ”

  1. Chandrashekar has set a great example of Unity between the two communities .
    Politicians and people of self interest with ulterior motives are the one dividing the people on religious line .

Leave a Comment

Your email address will not be published. Required fields are marked *