ಸಮಗ್ರ ನ್ಯೂಸ್: ಭ್ರಷ್ಟಚಾರಕ್ಕೆ ಕಡಿವಾಣ ಹಾಕುವ ಸದುದ್ದೇಶದಿಂದ ಹಾಗೂ ಜನಸಾಮಾನ್ಯರು ಕಂದಾಯ ಇಲಾಖೆಗೆ ಪದೇ ಪದೇ ಅಲೆದಾಡುವುದನ್ನು ತಪ್ಪಿಸಲು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಮಹತ್ವಕಾಂಕ್ಷಿ ಆಪ್ ಒಂದನ್ನು ಬಳಕೆಗೆ ತಂದಿದೆ. ರಾಜ್ಯ ಸರ್ಕಾರ ಸಾರ್ವಜನಿಕ ಬಳಕೆಗೆ ತಂದಿರುವ ಈ ಬಹುಪಯೋಗಿ ಆಪ್ ಗೆ ‘ಸ್ವಾವಲಂಬಿ ಆ್ಯಪ್’ ಎಂದು ಹೆಸರಿಡಲಾಗಿದೆ.
ಈ ಆಪ್ ಮೂಲಕ ತಮ್ಮತಮ್ಮಜಮೀನನ್ನು ಸಮೀಕ್ಷೆ ಮಾಡಿ ನಕ್ಷೆ ಸಿದ್ಧಪಡಿಸಿಕೊಳ್ಳುವ ಅವಕಾಶವನ್ನು ಜಮೀನಿನ ಮಾಲೀಕರಿಗೆ ನೀಡಲಾಗಿದೆ.
ಜನ ಸಾಮಾನ್ಯರು ತಮ್ಮ ಸ್ವಂತ ಜಮೀನಿನ ಸ್ಕೆಚ್, ಪೋಡಿ, ಭೂ ಪರಿವರ್ತನಾ ನಕ್ಷೆ (11e)ಗಳನ್ನು ಈ ಆಪ್ ಮೂಲಕ ತಾವೇ ತಯಾರಿಸಿಕೊಳ್ಳಬಹುದಾಗಿದೆ. ಸ್ವಾವಲಂಬಿ ಆ್ಯಪ್ ಮೂಲಕ ಸ್ವಯಂ ಸಮೀಕ್ಷೆ ನಡೆಸಿ ಸ್ವಂತ ನಕ್ಷೆ ಸಿದ್ಧಪಡಿಸಿಕೊಳ್ಳುವ ವ್ಯವಸ್ಥೆಯನ್ನು ಈ ಮೂಲಕ ಒದಗಿಸಲಾಗುತ್ತಿದೆ.