ಸಮಗ್ರ ನ್ಯೂಸ್: ಕಳ್ಳತನ ಮಾಡೋದು ಕಲಿಯಲು ಖತರ್ನಾಕ್ ಕಳ್ಳರ ಜೊತೆಗೆ ಟ್ರೈನಿಂಗ್ ಮಾಡಬೇಕಿಲ್ಲ. ಆದರೆ ಕಳ್ಳತನದ ವಿದ್ಯೆಯನ್ನು ಕರತಲಮಲಕ ಮಾಡಿಕೊಳ್ಳಲು ಯೂಟ್ಯೂಬ್ ಒಂದಿದ್ದರೆ ಸಾಕು. ಯುಟ್ಯೂಬ್ ನೋಡಿ ಕಳ್ಳತನಕ್ಕೆ ಇಳಿದಿದ್ದವರನ್ನು ಸಂಜಯ್ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಏಳು ಮನೆಗಳ ಕಿಟಕಿ ಮುರಿದು ಕಳ್ಳತನವನ್ನು ಮಾಡಲಾಗಿತ್ತು. ಪೊಲೀಸರು ವಿಶೇಷ ಕಾರ್ಯಾಚರಣೆಯಿಂದ ಇಬ್ಬರು ಅಂತಾರರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಕಳ್ಳತನಕ್ಕೆ ಇಳಿಯುವ ಮೊದಲು ಬೈಕ್ ಅನ್ನು ಕದಿಯುತ್ತಿದ್ದರು. ಅದೇ ಬೈಕ್ ನಲ್ಲಿ ಏರಿಯಾವನ್ನು ಸುತ್ತಸುತ್ತಿ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಆ ಒಂಟಿ ಮನೆಯ ಮಾಲೀಕರು ಯಾವಾಗ ಹೊರಗೆ ಹೋಗುತ್ತಾರೋ ಆ ಮನೆಯನ್ನು ಟಾರ್ಗೆಟ್ ಮಾಡಿ ಕಳ್ಳತನವನ್ನು ಮಾಡುತ್ತಿದ್ದರು.
ಕಳ್ಳತನಕ್ಕಿಳಿಯುವ ಮೊದಲು ಸೆರೆಸಿಕ್ಕಿರುವ ಕಳ್ಳರು ಯ್ಯೂಟ್ಯೂಬ್ ನಲ್ಲಿ ಕಳ್ಳತನ ಮಾಡೋದು ಹೇಗೆ..? ಕಳ್ಳತನ ಮಾಡಲು ಬೇಕಾದ ಸಲಕರಣೆಗಳು ಯಾವುದು..? ಎಂದೆಲ್ಲ ಗಮನಿಸಿದ್ದರು. ಅದರಂತೆಯೇ ಕಳ್ಳತನ ಮಾಡಲು ಬೇಕಾದ ಸಲಕರಣೆಗಳನ್ನ ಯ್ಯೂಟೂಬ್ ನಲ್ಲಿ ನೋಡಿ ಖರೀದಿಸಿದ್ದರು. ಕೃತ್ಯ ಎಸಗಲು ನಗರದಲ್ಲಿ ಬೈಕ್ ಕದ್ದು ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು.
ಇನ್ಸ್‌ಪೆಕ್ಟರ್ ಬಾಲರಾಜ್ ನೇತೃತ್ವದ ತಂಡ ತಮಗೆ ಸಿಕ್ಕ ಲೀಡ್ ಮತ್ತು ಸಿಸಿಟಿವಿಯ ಆಧಾರದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು. ಇದರರಿಂದಾಗಿ ಅಂತರರಾಜ್ಯ ಖದೀಮರನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 79 ಲಕ್ಷ ಮೌಲ್ಯದ 792 ಗ್ರಾಂ ಚಿನ್ನಾಭರಣ, ವಿವಿಧ ಕಂಪೆನಿಯ ಮೊಬೈಲ್, ಲಾಪ್‌ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.