ಸಮಗ್ರ ನ್ಯೂಸ್: ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಈ ಬಾರಿಯ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಜಿಲ್ಲಾಕೇಂದ್ರಗಳಲ್ಲಿ ಇಂದಿನಿಂದ ಆರಂಭಗೊಳ್ಳಲಿದೆ.
ಮೇ ತಿಂಗಳ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಕಳೆದ ಬಾರಿ ಕೋವಿಡ್ ಕಾರಣದಿಂದಾಗಿ ಓಎಂಆರ್ ಆಧಾರಿತ ಉತ್ತರ ಪತ್ರಿಕೆಗಳಿದ್ದ ಕಾರಣ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನದ ವ್ಯವಸ್ಥೆ ಇರಲಿಲ್ಲ.
ಈ ಬಾರಿ ಒಟ್ಟು 234 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಈ ಕಾರ್ಯಕ್ಕಾಗಿ 63,796 ಶಿಕ್ಷಕರನ್ನು ನಿಯೋಜಿಸಲಾಗಿದೆ.
ಮೌಲ್ಯಮಾಪನ ಪ್ರಕ್ರಿಯೆಯು 23 ರಿಂದ ಶುರುವಾಗಿ ಮೇ 1-2 ರೊಳಗೆ ಪೂರ್ಣಗೊಳ್ಳಲಿದೆ. ಮೇ 2 ಅಥವಾ 3 ನೇ ವಾರದೊಳಗೆ ಪರೀಕ್ಷೆಯ ಫಲಿತಾಂಶ ಪ್ರಕಟಿಸುವ ನಿರೀಕ್ಷೆ ಇದೆ.
ಎಸ್ಎಸ್ಎಲ್ಸಿ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಮೌಲ್ಯಮಾಪಕರು, ಸಿಬ್ಬಂದಿಯ ಸಂಭಾವನೆ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಕಳೆದ ವರ್ಷ 22 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಈ ಬಾರಿ ಅದನ್ನ 5% ಹೆಚ್ಚಳ ಮಾಡಲಾಗಿದೆ.
ಪರಿಷ್ಕತ ದರ ಹೀಗಿದೆ..
*ಜಂಟಿ ಮುಖ್ಯ ಪರೀಕ್ಷಕರು- 7270 ರೂ.
*ಉಪ ಮುಖ್ಯ ಪರೀಕ್ಷಕರು- 5464 ರೂ.
ಉತ್ತರ ಪತ್ರಿಕೆ ಮೌಲ್ಯಮಾಪನ ದರಗಳು: (ಪ್ರತಿ ಪತ್ರಿಕೆಗೆ)* ಪ್ರಥಮ ಭಾಷೆ- 23 ರೂ.
- ದ್ವಿತೀಯ/ತೃತೀಯ ಭಾಷೆ- 21 ರೂ.
- ಐಚ್ಛಿಕ ವಿಷಯಗಳು- 21 ರೂ.
ಭತ್ಯೆ1) ದಿನಭತ್ಯೆ (ಬೆಂಗಳೂರು)- 596
2) ದಿನ ಭತ್ಯೆ (ಇತರೆ ಸ್ಥಳ)- 469
3) ಸ್ಥಳೀಯ ಭತ್ಯೆ( ಬೆಂಗಳೂರು)- 234
4) ಸ್ಥಳೀಯ ಭತ್ಯೆ( ಇತರೆ ಸ್ಥಳಗಳು)- 189
5) ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ-4515
6) ಕ್ಯಾಂಪ್ ಸಹಾಯಕರು- 1260
7) ಡಿ ದರ್ಜೆ ಸಿಬ್ಬಂದಿ- 630