Ad Widget .

ಉಡುಪಿ: ‘ಹಿಜಾಬ್‌ಗಾಗಿ ನಾಳೆಯೂ ಹೈಡ್ರಾಮ ಮಾಡಿದರೆ ಕ್ರಿಮಿನಲ್ ಕೇಸ್’-ರಘುಪತಿ ಭಟ್

ಸಮಗ್ರ ನ್ಯೂಸ್: ಹೈಕೋರ್ಟ್‌ ಆದೇಶ ಮೀರಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ನಾಳೆಯೂ ಪಟ್ಟು ಹಿಡಿದರೆ ಅಂತಹ ವಿದ್ಯಾರ್ಥಿನಿಯರ ಮೇಲೆ ಕ್ರಿಮಿನಲ್ ಕೇಸ್ ಜೊತೆಗೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ ಶಾಸಕ ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಉಡುಪಿ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಹೋರಾಟಗಾರ್ತಿಯರಿಬ್ಬರು ಹೈಡ್ರಾಮಾ ಸೃಷ್ಟಿಸಿರುವುದಕ್ಕೆ ಆಕ್ರೋಶ ಹೊರ ಹಾಕಿದ ಅವರು, ಇದೊಂದು ಷಡ್ಯಂತ್ರ ಅನ್ನುವುದು ಸಾಬೀತಾಗಿದೆ. ನಿನ್ನೆ ಸಂಜೆಯವರೆಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಲಾಗಿತ್ತು. ಬೆಳಗ್ಗಿನವರೆಗೂ ಹಾಲ್ ಟಿಕೆಟ್ ಪಡೆಯಲು ಬರಲಿಲ್ಲ. ಇಂದು ಬೆಳಗ್ಗೆ 9.30ಕ್ಕೆ ಕಾಲೇಜಿಗೆ ಬಂದವರಿಗೆ ಹಿಜಾಬ್ ತೆಗೆದಿಟ್ಟು ಹೋದರೆ ಮಾತ್ರ ಹಾಲ್ ಟಿಕೆಟ್ ಕೊಡುವುದಾಗಿ ಪ್ರಾಂಶುಪಾಲರು ಹೇಳಿದ್ದರಿಂದ ಹಿಜಾಬ್ ತೆಗೆದು ಹಾಲ್ ಟಿಕೆಟ್ ಪಡದುಕೊಂಡು ಹೋಗಿದ್ದಾರೆ. ಆದರೆ ಬಳಿಕ ಪರೀಕ್ಷಾ ಕೇಂದ್ರಕ್ಕೆ ಹೋಗಿ ಡ್ರಾಮಾ ಮಾಡಿದ್ದಾರೆ ಎಂದರು.

Ad Widget . Ad Widget . Ad Widget .

ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ಮಾತನಾಡಿದ್ದೇನೆ. ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಹೇಳಿದ್ದೇನೆ. ಅಲ್ಲದೆ, ಯಥಾ ಪ್ರಕಾರ ಮುಂದುವರೆದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.

ಇವರೇನು ಹುಡುಗಾಟಿಕೆ ಮಾಡುತ್ತಿದ್ದಾರಾ? ಇವರು ಮುಗ್ದ ಮಕ್ಕಳಲ್ಲ. ಹೈಕೋರ್ಟ್‌ನ ಅರ್ಜಿದಾರರು. ಹಿಜಾಬ್ ಮತ್ತು ಪರೀಕ್ಷೆಗೆ ಸಂಬಂಧ ಇಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೂಡ ಹೇಳಿದ್ದಾರೆ. ಈ ಮಕ್ಕಳ ಮೇಲೆ ಶಿಸ್ತುಕ್ರಮ ಕೈಗೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ತರಗತಿಗೇ ಸರಿಯಾಗಿ ಹಾಜರಾಗದ ಇವರೇನು ಪರೀಕ್ಷೆ ಬರೆಯುತ್ತಾರೆ ಎಂದು ಪ್ರಶ್ನಿಸಿದ ರಘುಪತಿ ಭಟ್,
ಹಿಜಾಬ್ ಧರಿಸಲು ಬಿಟ್ಟರೂ ಅವರು ಪರೀಕ್ಷೆ ಬರೆಯುವುದಿಲ್ಲ. ನಮ್ಮ ಕಾಲೇಜಿನ ವಾತಾವರಣ ಕೆಡಿಸುವುದು ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವುದೇ ಇವರ ಉದ್ದೇಶ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿದ್ಯಾರ್ಥಿನಿಯರು ಹೈಕೋರ್ಟ್ ಗಿಂತ ಮೇಲಾ? ಇವರಿಂದ ಬೇರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ವಿದ್ಯಾರ್ಥಿನಿಯರಿಗೆ ಯಾಕೆ ಕಡಿವಾಣ ಹಾಕುವುದಿಲ್ಲ ಎಂಬುದಾಗಿ ನನಗೆ ಅನೇಕ ಪೋಷಕರು ಕರೆ ಮಾಡಿದ್ದಾರೆ. ನಮ್ಮ ಮಕ್ಕಳಿಗೆ ಪರೀಕ್ಷೆ ಬರೆಯಲು ಅಡ್ಡಿಯಾಗುತ್ತದೆ ಎಂದಿದ್ದಾರೆ. ಪೊಲೀಸ್ , ಮೀಡಿಯಾ ಎದುರು ಇತರ ಮಕ್ಕಳು ಗಾಬರಿಯಾಗಿದ್ದಾರೆ.

ಈ ಮಕ್ಕಳ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲ. ಮೀಡಿಯಾದ ಅಟೆನ್ಶನ್ ಪಡೆಯಲು ಹೀಗೆಲ್ಲ ಮಾಡುತ್ತಿದ್ದಾರೆ. ಇನ್ನು ನಾವೇ ಕಾನೂನು ಕ್ರಮ ಕೈಗೊಳ್ಳಲು‌ ಮುಂದಾಗುತ್ತೇವೆ. ನ್ಯಾಯಾಂಗ ನಿಂದನೆಯ ಕೇಸು ಮಾಡುತ್ತೇವೆ. ಈವೆರೆಗೆ ಸಂಘಟನೆಯ ಕೈವಾಡ ಎಂದು ಹೇಳುತ್ತಿದ್ದೆವು. ಈ ಮಕ್ಕಳು, ಇವರ ಪೋಷಕರು ಅನ್ನ ತಿನ್ನುವುದಿಲ್ಲವಾ ಎಂದು ಪ್ರಶ್ನಿಸಿದರು.

ಈವರೆಗೂ ಹೆಣ್ಣು ಮಕ್ಕಳು ಮುಗ್ಧರು ಎಂದು ಭಾವಿಸಿದ್ದೆ. ನಾಳೆ ಸಂಘಟನೆಯವರು ಭಯೋತ್ಪಾದಕರಾಗಿ ಅಂತಾರೆ, ಗನ್ ಹಿಡಿದುಕೊಳ್ಳಿ ಅಂತಾರೆ, ಅದನ್ನು ಇವರು ಕೇಳುತ್ತಾರಾ? ಮಾನವ ಬಾಂಬ್ ಆಗಿ ಅಂತಾರೆ ಅದನ್ನೂ ಕೇಳುತ್ತಾರಾ? ಎಂದು ರಘುಪತಿ ಭಟ್ ಪ್ರಶ್ನಿಸಿದರು.

Leave a Comment

Your email address will not be published. Required fields are marked *