ಸಮಗ್ರ ಡಿಜಿಟಲ್ ಡೆಸ್ಕ್: ಒಬ್ಬ ಮನುಷ್ಯ ಎರಡು ತಲೆ, ಎರಡು ಕಾಲು, ಎರಡು ಕೈ ಹೊಂದಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಮಗು ಎರಡು ಗುಪ್ತಾಂಗವನ್ನು ಹೊಂದಿಕೊಂಡು ಜನ್ಮತಳೆದಿದ್ದು ಅಚ್ಚರಿಗೆ ಕಾರಣವಾಗಿದೆ.
ಇದು ಪ್ರತಿ ಐದರಿಂದ ಆರು ಮಿಲಿಯನ್ ಗಂಡುಮಕ್ಕಳಲ್ಲಿ ಒಬ್ಬರು ಮಾತ್ರ ಹೆಚ್ಚುವರಿ ಶಿಶ್ನದೊಂದಿಗೆ ಜನಿಸುತ್ತಾರೆ. ಗರ್ಭಾಶಯದಲ್ಲಿ ಜನನಾಂಗ ಬೆಳವಣಿಗೆ ಯಾದಾಗ ಇದು ಕಂಡು ಬರುತ್ತದೆ. ಇದನ್ನ 1609 ರಲ್ಲಿ ಸ್ವಿಸ್ ವೈದ್ಯ ಜೋಹಾನ್ಸ್ ಜಾಕೋಬ್ ವೇಕಾರ್ ವರದಿ ಮಾಡಿದ್ದಾರೆ.
ಈ ಘಟನೆ ಬ್ರೇಜಿಲ್ ನಲ್ಲಿ ನಡೆದಿದ್ದು,ಗಂಡು ಮಗುವೊಂದು ಎರಡು ಗುಪ್ತಾಂಗ ಹೊಂದಿರುವುದು ಬೆಳಕಿಗೆ ಬಂದಿದೆ. ಬಲ ಶಿಶ್ನ ಅವಶ್ಯಕವಾಗಿರುವುದರಿಂದ ವೈದ್ಯರು ಎಡ ಶಿಶ್ನವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಿದ್ದಾರೆ.
ಯಾವುದೆ ತೊಂದರೆ ಇಲ್ಲದೆ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ.