ಸಮಗ್ರ ಡಿಜಿಟಲ್ ಡೆಸ್ಕ್: ಸರೋವರದಲ್ಲಿ ತಿರುಗುತ್ತಿರುವ ಸುಳಿಯ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಯುಎಸ್‌ನ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ ಎನ್ನಲಾಗಿದೆ.
ಈ ವಿದ್ಯಮಾನವು ಇತ್ತೀಚೆಗೆ ಪೂರ್ವ ನಾಪಾ ಕಣಿವೆಯಲ್ಲಿರುವ ಲೇಕ್ ಬೆರ್ರಿಸ್ಸಾ ಜಲಾಶಯದಲ್ಲಿ ಕಂಡುಬoದಿದೆ. ಪೋರ್ಟಲ್ ಟು ಹೆಲ್ ಹಲವು ವರ್ಷಗಳಿಂದ ಪ್ರೇಕ್ಷಕರನ್ನು ಭಯ ಪಡೆಸುತ್ತಿದೆ.
ಇದು 2018 ಮತ್ತು 2019ರಲ್ಲಿ 72 ಅಡಿ ಅಗಲದ ದೈತ್ಯ ರಂಧ್ರ ಕಂಡುಬoದಿತ್ತು.
ಸರೋವರದಲ್ಲಿ ನೀರಿನ ಮಟ್ಟವು ತುಂಬಾ ಹೆಚ್ಚಾದ ನಂತರ ಈ ರಂಧ್ರ ಸಂಭವಿಸಿದೆ. ಹೆಚ್ಚುವರಿ ನೀರು ಈಗ ಬೃಹತ್ ರಂಧ್ರಕ್ಕೆ ಸುಳಿಯಬಹುದು. ಇದು ಅದ್ಭುತವಾದ ಸುಳಿಯ ಪರಿಣಾಮವನ್ನು ಸೃಷ್ಟಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.