ಸಮಗ್ರ ನ್ಯೂಸ್ : ಉಡುಪಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಗ್ನಿ ದುರಂತವೊಂದು ನಡೆದಿದ್ದು, ಮಣಿಪಾಲದ ವೆಷ್ಟೇಕ್ ಎಂಟರ್ಪ್ರೈಸಸ್ನಲ್ಲಿ ಭಾರೀ ನಷ್ಟ ಸಂಭವಿಸಿದೆ.
ರಾತ್ರಿ ವೇಳೆ ವೆಷ್ಟೇಕ್ ಎಂಟರ್ಪ್ರೈಸಸ್ನಲ್ಲಿ ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕಿಸಲಾಗಿದೆ.
ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಮುಂಜಾನೆವರೆಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿದೆ ಎಂದು ತಿಳಿದುಬಂದಿದೆ.