ಸಮಗ್ರ ನ್ಯೂಸ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹನುಮ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದು 9 ಜನರನ್ನು ಬಂಧಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ವಾಯುವ್ಯ ಭಾಗದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿಯ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ 9 ಜನರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹನುಮಜಯಂತಿ ಶೋಭಾಯಾತ್ರೆಗೆ ಕಲ್ಲು ತೂರಾಟ ಮಾಡಿದು ಮಾತ್ರ ವಲ್ಲದೆ, ಗುಂಡಿನ ದಾಳಿಯು ನಡೆಸಲಾಗಿದೆ. 6 ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿದ್ದು, 14 ಜನ ಅರೆಸ್ಟ್ ಮಾಡಲಾಗಿದೆ.
ಜೊತೆಗೆ ಗುಂಪೊಂದು ಕೈಯಲ್ಲಿ ಖಡ್ಗ, ತಲ್ವಾರ್ ಹಿಡಿದು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು ಎನ್ನುವುದು ತಿಳಿದು ಬಂದಿದೆ. ದುಷ್ಕರ್ಮಿಗಳು ವಾಹನಗಳ ಮೇಲು ದಾಳಿ ನಡೆಸಿದ್ದಾರೆ. ಈ ಪರಿಸ್ಥಿತಿಯಿಂದ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಸಾಮಾಜಿಕ ಜಾಲತಾಣ, ಸಿ ಸಿ ಟಿವಿ ದೃಶ್ಯದಿಂದ ಶಂಕಿತರನ್ನು ಪತ್ತೆ ಹಚ್ಚಲಾಗಿದೆ. ಈ ಪ್ರಕರಣದ ತನಿಖೆಗೆ ಅಧಿಕಾರಿಗಳ ಹತ್ತು ತಂಡವನ್ನು ನಿರ್ಮಿಸಿದ್ದಾರೆ.