ಮಂಗಳೂರು: ಮೇ 19: ಇಲ್ಲಿನ ಸೂಪರ್ ಮಾರ್ಕೆಟ್ ಗೆ ತೆರಳಿ ಮಾಸ್ಕ್ ಬಗ್ಗೆ ವಾಗ್ವಾದ ಮಾಡಿ ತೆರಳಿದ್ದ ನಗರದ ಖ್ಯಾತ ವೈದ್ಯ ಡಾ.ಬಿ.ಎಸ್. ಕಕ್ಕಿಲ್ಲಾಯ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಕದ್ರಿಯಲ್ಲಿ ಕಾರ್ಯಾಚರಿಸುತ್ತಿರುವ ಜಿಮ್ಮಿ ಮಾರ್ಕೆಟ್ ಪಾಲುದಾರ ರೇನ್ ರೊಸಾರಿಯೋ ಕದ್ರಿ ಠಾಣೆಯಲ್ಲಿ ಕಕ್ಕಿಲಾಯ ವಿರುದ್ಧ ದೂರು ನೀಡಿದ್ದಾರೆ. ಮೇ 18ರ ಬೆಳಗ್ಗೆ ಮಾರ್ಕೆಟ್ ಗೆ ಬಂದಿದ್ದ ವೈದ್ಯರು ಅಲ್ಲಿನ ಸಿಬ್ಬಂದಿ ಜೊತೆ ಮಾಸ್ಕ್ ವಿಚಾರದಲ್ಲಿ ವಾಗ್ವಾದ ನಡೆಸಿದ್ದಾರೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕೆಂದು ಸರಕಾರದ ಮಾರ್ಗಸೂಚಿ ಇದೆ. ಆದರೆ, ವೈದ್ಯರು ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸೂಪರ್ ಮಾರ್ಕೆಟ್ ಸಿಬ್ಬಂದಿ ವೈದ್ಯರು ವಾಗ್ವಾದ ಮಾಡಿದ್ದ ಸಿಸಿಟಿವಿ ವಿಡಿಯೋವನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ವಿಡಿಯೋ ಹರಿದಾಡುತ್ತಿದ್ದಂತೆ ಸಾರ್ವಜನಿಕರ ಕಡೆಯಿಂದ ಆಕ್ರೋಶ ವ್ಯಕ್ತವಾಗಿತ್ತು.
ಕೊನೆಗೂ ಮಾಸ್ಕ್ ಧರಿಸಿದ ಡಾ. ಕಕ್ಕಿಲಾಯ : https://youtube.com/shorts/Wcna-NgnZGM?feature=share
ಪೊಲೀಸರು ವೈದ್ಯರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.